ಕರ್ನಾಟಕ

karnataka

ETV Bharat / state

15 ದಿನಗಳಲ್ಲಿ ಪ್ರವಾಹ ಸಂತ್ರಸ್ತ ಗ್ರಾಮಗಳಿಗೆ ವಿದ್ಯುತ್​ ಪೂರೈಸುವಂತೆ ಖಡಕ್​ ಎಚ್ಚರಿಕೆ ನೀಡಿದ ಸಚಿವ ಸವದಿ - Power supply to villages

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ನೆರೆ ಸಂತ್ರಸ್ತ ಗ್ರಾಮಗಳಿಗೆ 15 ದಿನಗಳ ಒಳಗಾಗಿ ವಿದ್ಯುತ್ ಪೂರೈಸುವಂತೆ ಹೆಸ್ಕಾಂ ಅಧಿಕಾರಿಗಳಿ ಖಡಕ್​ ಸೂಚನೆ ನೀಡಿದ ಸಚಿವ ಲಕ್ಷ್ಮಣ ಸವದಿ.

ಸಚಿವ ಲಕ್ಷ್ಮಣ ಸವದಿ

By

Published : Aug 22, 2019, 4:52 PM IST

ಬೆಳಗಾವಿ: 15 ದಿನಗಳ ಒಳಗಾಗಿ ನೆರೆ ಸಂತ್ರಸ್ತ ಗ್ರಾಮಗಳಿಗೆ ವಿದ್ಯುತ್​ ಪೂರೈಕೆಯಾಗಬೇಕು. ಇಲ್ಲವಾದರೆ ವಿದ್ಯುತ್ ಪೂರೈಸುವವರೆಗೂ ನೀವು ಅಲ್ಲೆ ವಾಸಿಸಬೇಕು ಎಂದು ಸಚಿವ ಲಕ್ಷ್ಮಣ್​ ಸವದಿ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಸಚಿವ ಲಕ್ಷ್ಮಣ ಸವದಿ

ಗೋಕಾಕ್​ ನಗರದಲ್ಲಿ ಗುರುವಾರ ನಡೆದ ಪುನರ್ವಸತಿ ಸಭೆಯಲ್ಲಿ ಈ ಘಟನೆ ಸಚಿವರು ಅಧಿಕಾರಿಗಳಿಗೆ ಈ ಖಡಕ್​ ಸೂಚನೆ ನೀಡಿದ್ರು.

ಪ್ರವಾಹದಿಂದ ಕೊಚ್ಚಿ ಹೋಗಿದ್ದ ವಿದ್ಯುತ್ ಕಂಬಗಳ ದುರಸ್ತಿಗೆ ಹೆಸ್ಕಾಂ ಅಧಿಕಾರಿಗಳು 2 ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೊಪ್ಪದ ಸಚಿವ ಸವದಿ ಅವರು, ಅಗತ್ಯ ಪರಿಕರ, ಸೌಲಭ್ಯಗಳನ್ನು ಒದಗಿಸುತ್ತೇವೆ. ಕೂಡಲೇ ಕೆಲಸ ಪ್ರಾರಂಭಿಸಿ ಎಂದು ಹೇಳಿದ್ರು.

15 ದಿನಗಳಲ್ಲಿ ಕೆಲಸ ಮುಗಿಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಜಿಲ್ಲಾಧಿಕಾರಿಗೆ ಸೂಚಿಸಿದ್ರು.

ABOUT THE AUTHOR

...view details