ಬೆಳಗಾವಿ :ಮಲಪ್ರಭಾ ನದಿ ಬ್ರಿಡ್ಜ್ ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿ ರಕ್ಷಿಸಿದ ಕರವೇ ಕಾರ್ಯಕರ್ತ
ಸ್ಥಳಕ್ಕೆ ಆಗಮಿಸಿ ಪೊಲೀಸರು ಯುವತಿಯನ್ನು ಕರೆದೊಯ್ದು ವಿಚಾರಣೆ ನಡೆಸಿದರು. ಮನೆಯಲ್ಲಿ ತಂದೆ ವಿಪರೀತ ಹಿಂಸೆ ನೀಡುತ್ತಿದ್ದಾನೆಂದು ಯುವತಿ ದೂರಿದ್ದಾಳೆ. ಬಳಿಕ ಯುವತಿಗೆ ಬುದ್ಧಿವಾದ ಹೇಳಿದ ಖಾನಾಪುರ ಪೊಲೀಸರು ಮನೆಗೆ ಕಳುಹಿಸಿದ್ದಾರೆ..
ಡೋಗರಗಾಂವ ಗ್ರಾಮದ ನಿರ್ಮಲಾ ಎಂಬಾಕೆ ರಕ್ಷಣೆಗೆ ಒಳಗಾದ ಯುವತಿ. ಕರವೇ ಕಾರ್ಯಕರ್ತ ಇಬ್ರಾಹಿಂ ತಹಶೀಲ್ದಾರ್ ಎಂಬುವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಖಾನಾಪುರ ಬಳಿ ಮಲಪ್ರಭಾ ನದಿ ಬ್ರಿಡ್ಜ್ ಮೇಲಿಂದ ಹಾರಲು ಯುವತಿ ಯತ್ನಿಸುತ್ತಿದ್ದಳು. ಬೈಕ್ ಮೇಲೆ ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಇಬ್ರಾಹಿಂ ತಕ್ಷಣವೇ ಯುವತಿಯನ್ನು ತಡೆದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿ ಪೊಲೀಸರು ಯುವತಿಯನ್ನು ಕರೆದೊಯ್ದು ವಿಚಾರಣೆ ನಡೆಸಿದರು. ಮನೆಯಲ್ಲಿ ತಂದೆ ವಿಪರೀತ ಹಿಂಸೆ ನೀಡುತ್ತಿದ್ದಾನೆಂದು ಯುವತಿ ದೂರಿದ್ದಾಳೆ. ಬಳಿಕ ಯುವತಿಗೆ ಬುದ್ಧಿವಾದ ಹೇಳಿದ ಖಾನಾಪುರ ಪೊಲೀಸರು ಮನೆಗೆ ಕಳುಹಿಸಿದ್ದಾರೆ.
TAGGED:
ಬೆಳಗಾವಿ