ಕರ್ನಾಟಕ

karnataka

ETV Bharat / state

ಖಾಸಗಿ ಬಸ್​ನಿಂದ ದುಪ್ಪಟ್ಟು ದರ ವಸೂಲಿ: ತರೀಕೆರೆಯಿಂದ ಶಿವಮೊಗ್ಗ‌ಕ್ಕೆ 80 ರೂ.! - ಬಸ್​ ಪ್ರಯಾಣಿಕರ ಸಮಸ್ಯೆ

ತರೀಕೆರೆಯಿಂದ ಶಿವಮೊಗ್ಗಕ್ಕೆ ಸರ್ಕಾರಿ ಬಸ್​ನಲ್ಲಿ 40 ರೂ. ಪ್ರಯಾಣ ದರವಿದೆ. ಆದರೆ ತರೀಕೆರೆಯಿಂದ ಶಿವಮೊಗ್ಗಕ್ಕೆ ಬರಲು ಬರೋಬ್ಬರಿ 80 ರೂ. ಪಡೆಯಲಾಗಿದೆ.

private-buses-charge-double-amount
private-buses-charge-double-amount

By

Published : Apr 8, 2021, 3:53 PM IST

ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ಬಸ್ ನೌಕರರ ಪ್ರತಿಭಟನೆಯಿಂದ ಅವರ ಮಾರ್ಗಕ್ಕೆ ರಸ್ತೆಗಿಳಿದ ಖಾಸಗಿ ಬಸ್​ಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ‌ ಮಾಡುತ್ತಿವೆ. ಖಾಸಗಿ ಬಸ್​ನವರು ಹೆಚ್ಚಿನ ದರ ಪಡೆಯಬಾರದು ಎಂದು ಸರ್ಕಾರ ಆದೇಶ ಮಾಡಿದ್ದರೂ ಸಹ ಖಾಸಗಿ ಬಸ್​ನವರು ಇದೇ ಚಾನ್ಸ್ ಎಂದು ದುಪ್ಪಟ್ಟ‌ ಹಣ ವಸೂಲಿಗೆ ಇಳಿದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಖಾಸಗಿ ಬಸ್​ನಿಂದ ದುಪ್ಪಟ್ಟು ದರ ವಸೂಲಿ

ತರೀಕೆರೆಯಿಂದ ಶಿವಮೊಗ್ಗಕ್ಕೆ 80 ರೂ.!

ತರೀಕೆರೆಯಿಂದ ಶಿವಮೊಗ್ಗಕ್ಕೆ ಸರ್ಕಾರಿ ಬಸ್​ನಲ್ಲಿ 40 ರೂ. ಪ್ರಯಾಣ ದರವಿದೆ. ಆದರೆ ತರೀಕೆರೆಯಿಂದ ಶಿವಮೊಗ್ಗಕ್ಕೆ ಬರಲು ಬರೋಬ್ಬರಿ 80 ರೂ. ಪಡೆಯಲಾಗಿದೆ. ಈ ಬಗ್ಗೆ ಸ್ವತಃ ಹಣ ನೀಡಿದ ತರೀಕೆರೆಯ ನಿವಾಸಿ‌ ಮೋಹನ್ ಲಾಲ್‌ ಎಂಬುವರು ಯಾಕಿಷ್ಟು ಹಣ ಪಡೆದುಕೊಂಡಿರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ನಮ್ಮದು ಇಷ್ಟೇ ದರ ಎಂದು ಆವಾಜ್ ಹಾಕಿದ್ದಾರಂತೆ.

ಬಸ್ ಇಳಿಯುತ್ತಿದಂತಯೇ ವೃದ್ಧ ಮೋಹನ್ ಲಾಲ್ ಈ ಸಂಬಂಧ ದೂರು ನೀಡಲು‌ ಹೋಗಿದ್ದಾರೆ. ಸಾರ್ವಜನಿಕರ ಅನುಕೂಲಕ್ಕೆ ಈ ಕುರಿತು ಕ್ರಮ ತೆಗೆದುಕೊಂಡು‌ ತಪ್ಪಿತಸ್ಥರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ABOUT THE AUTHOR

...view details