ಬೆಳಗಾವಿ :ಲಾಕ್ ಡೌನ್ ಮಧ್ಯೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಅಬಕಾರಿ ಪೊಲೀಸರ ಕಾರ್ಯಾಚರಣೆ: 22 ಲಕ್ಷ ಮೌಲ್ಯದ ಕಳ್ಳಭಟ್ಟಿ ವಶ - Police Raid on illegal Liquor Mafia
ಲಾಕ್ ಡೌನ್ ಮಧ್ಯೆ ಎಗ್ಗಿಲ್ಲದೆ ನಡೆಯುತ್ತಿದ್ದ ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ಪೊಲೀಸರ ದಾಳಿ
ಕಾರ್ಯಾಚರಣೆ ವೇಳೆ 22 ಲಕ್ಷ ರೂ ಮೌಲ್ಯದ 537 ಲೀಟರ್ ಸಾರಾಯಿ ಜಪ್ತಿ ಮಾಡಿದ್ದು, ಈವರೆಗೆ 37 ಕೇಸ್ ದಾಖಲಿಸಿ, 21 ಆರೋಪಿಗಳನ್ನು ಬಂಧಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ 12.340 ಲೀಟರ್ ಅಕ್ರಮ ಮದ್ಯ, 27 ಲೀಟರ್ ಗೋವಾ ಮದ್ಯ, 40 ಲೀ ಶೇಂದಿ, 50 ಲೀ ಬೆಲ್ಲದ ಕೊಳೆ, 25 ದ್ವಿಚಕ್ರ ವಾಹನ, ಒಂದು ಆಟೋ ರಿಕ್ಷಾ, 2 ಗೂಡ್ಸ್ ವಾಹನಗಳನ್ನು ಜಪ್ತಿ ಮಾಡಲಾಗಿದೆ.