ಬೆಳಗಾವಿ:ತಂದೆಯನ್ನು ಕೊಲೆಗೈದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಠಲ ಕಮತೆ (35) ಹಾಗೂ ಸುರೇಶ ಡಂಗೇರ್ (30) ಬಂಧಿತ ಆರೋಪಿಗಳು.
ತಂದೆಯನ್ನು ಕೊಂದ ಸೇಡಿನಿಂದ ಆರೋಪಿಗಳು ರಾಯಭಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಶೌಕತ್ ನದಾಫ್ (45) ಎಂಬಾತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು.
ಕಳೆದ 10 ವರ್ಷಗಳ ಹಿಂದೆ ಪ್ರಕರಣ ಒಂದರಲ್ಲಿ ಹಿಂಡಲಗಾ ಜೈಲಿನಲ್ಲಿ ಕೊಲೆಯಾದ ಶೌಕತ್ ನದಾಫ್ ಇದ್ದನು. ಇತ್ತ ಶಿಕ್ಷೆಗೊಳಗಾಗಿದ್ದ ಭೀಮಪ್ಪ ಕೂಡ ಅದೇ ಜೈಲಿನಲ್ಲಿದ್ದರು. ಈ ವೇಳೆ ಜೈಲಿನಲ್ಲಿಯೇ ಭೀಮಪ್ಪನನ್ನು ಶೌಕತ್ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ಇದೇ ಸೇಡಿನಿಂದ ಶೌಕತ್ನನ್ನು ಟಾರ್ಗೆಟ್ ಮಾಡಿ, ಭೀಮಪ್ಪನ ಮಗ ಹಾಗೂ ಸಹಚರರು ಶೌಕತ್ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಸದ್ಯ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: 'ಉಕ್ರೇನ್ನಲ್ಲಿ ಭಾರತೀಯರ ಕಷ್ಟ ನೋಡಿ ಹೃದಯ ಕರಗಿದೆ'.. ತಾಯ್ನಾಡಿಗೆ ಕರೆತರುವ ಪ್ರಕ್ರಿಯೆಯಲ್ಲಿ ರಾಜಕೀಯ ಬೇಡ ಎಂದ ಹೆಚ್ಡಿಡಿ!