ಚಿಕ್ಕೋಡಿ (ಬೆಳಗಾವಿ): ಕುಡಚಿ ಕ್ಷೇತ್ರ ತೊರೆಯುತ್ತೇನೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಅಂತಹ ಸಂದರ್ಭ ಬಂದರೆ, ನಾನು ನನ್ನ ಕುಟುಂಬಕ್ಕೆ ಮೋಸ ಮಾಡಬಹುದು, ಆದರೆ ಕುಡಚಿ ಮತಕ್ಷೇತ್ರ ಜನರನ್ನು ಮೋಸ ಮಾಡುವುದಿಲ್ಲ, ನಾನು ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದಲೇ ಸ್ಪರ್ದೆ ಮಾಡುತ್ತೇನೆ ಎಂದು ಕುಡಚಿ ಶಾಸಕ ಪಿ ರಾಜೀವ್ ಕ್ಷೇತ್ರ ಬದಲಾವಣೆ ಊಹಾಪೋಹಗಳಿಗೆ ತೆರೆ ಎಳೆದರು.
ರಾಯಭಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಕುಡಚಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಪಿ ರಾಜೀವ್ ಮಾತನಾಡಿ, ನಾನು ಕುಡಚಿ ಕ್ಷೇತ್ರ ತೋರೆಯುತ್ತೆನೆ ಎಂದು, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿವೆ. ನನ್ನನ್ನು ಕೈ ಹಿಡಿದ ಮತಕ್ಷೇತ್ರದ ಜನರನ್ನು ನಾನು ಬಿಟ್ಟು ಹೋಗುವುದಿಲ್ಲ, ಸಾಯುವ ಕೊನೆ ಕ್ಷಣದವರಿಗೆ ನಿಮ್ಮನ್ನು ನೆನೆಸಿಕೊಂಡು ಪ್ರಾಣ ಬಿಡುತ್ತೇನೆ, ಹೊರತಾಗಿ ನಿಮ್ಮ ಸೇವೆಯಿಂದ ದೂರ ಹೋಗಲ್ಲ ಎಂದು ಶಾಸಕ ಪಿ ರಾಜೀವ್ ಮಾರ್ಮಿಕವಾಗಿ ನುಡಿದರು.
ನಂತರದ ಮಾದ್ಯಮ ಜೊತೆ ಮಾತನಾಡಿ, ಭಾರತಿ ಜನತಾ ಪಕ್ಷದ ಎಂದರೆ ಅದು ಶಿಸ್ತು ಹೊಂದಿರುವ ಪಕ್ಷ. ನಾನು ಶಿಸ್ತಿನ ಸಿಪಾಯಿ ಆಗಿದ್ದರಿಂದ ಏನು ಹೇಳಿಕೆ ಕೊಡಬೇಕು ಅದನ್ನು ಕೊಡ್ತಾ ಬಂದಿದ್ದೇನೆ. ಆದರೆ, ನಾನು ಸ್ಪರ್ಧೆ ಮಾಡುವುದು ಕುಡಚಿ ಮತಕ್ಷೇತ್ರ ನಾನು ಎಲ್ಲಿಯೂ ಇಂತಹ ಕಡೆಯಿಂದ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿಲ್ಲ ಎಂದು ಪ್ರತಿಕ್ರಿಯಿಸಿದರು.
ಪ್ರಿಯಾಂಕ ಖರ್ಗೆ ವಿರುದ್ಧ ಪಿ ರಾಜೀವ್ ಆಕ್ರೋಶ : ದೊಡ್ಡವರು ದರ್ಪ ಇರುವವರು, ಚುನಾವಣೆ ಸ್ಪರ್ಧೆಗೆ ನಮ್ಮಂತವರಿಗೆ ಆಹ್ವಾನ ಕೊಡುತ್ತಿರುತ್ತಾರೆ. ಆಹ್ವಾನಗಳಿಗೆ ಅಲ್ಲಿನ ಜನತೆಯ ತಕ್ಕ ಉತ್ತರ ಕಲಿಸುತ್ತಾರೆ. ಚಿತ್ತಾಪುರವನ್ನು ಎದುರಿಸಲಿಕ್ಕೆ ನಮ್ಮ ಬಿಜೆಪಿ ಅಭ್ಯರ್ಥಿ ಸಮರ್ಥರಾಗಿದ್ದಾರೆಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಪಿ ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.