ಕರ್ನಾಟಕ

karnataka

ETV Bharat / state

ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ.. ನೂತನ ಸಚಿವ ಲಕ್ಷ್ಮಣ ಸವದಿ - minister lakshman savadi

ಶಾಸಕನಲ್ಲದಿದ್ದರೂ ನಮ್ಮ ನಾಯಕರು ನನಗೆ ಸಚಿವ ಸ್ಥಾನ ಕರುಣಿಸಿದ್ದಾರೆ. ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ: ಸಚಿವ ಲಕ್ಷ್ಮಣ ಸವದಿ

By

Published : Aug 21, 2019, 5:59 PM IST

ಬೆಳಗಾವಿ:ಶಾಸಕನಲ್ಲದಿದ್ದರೂ ನಮ್ಮ ನಾಯಕರು ನನಗೆ ಸಚಿವ ಸ್ಥಾನ ಕರುಣಿಸಿದ್ದಾರೆ. ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ.. ಸಚಿವ ಲಕ್ಷ್ಮಣ ಸವದಿ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರ ಮುನಿಸಿನಿಂದ ನನಗೆ ಸೋಲಾಗಿತ್ತು. ಗುರುವಿನ ಸ್ಥಾನದಲ್ಲಿರುವ ನಮ್ಮ ನಾಯಕರು ನನ್ನ ಕೈಹಿಡಿದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನಾನು ಒಳ್ಳೆಯ ಕೆಲಸ ಮಾಡಬಲ್ಲೆ, ಸರ್ಕಾರಕ್ಕೆ ಒಳ್ಳೆಯ ಹೆಸರು ತರಬಲ್ಲೆ ಎಂಬ ವಿಶ್ವಾಸ ನಮ್ಮ ನಾಯಕರಿಗೆ ಬಂದಿದಕ್ಕೆ ನನಗೆ ಅವಕಾಶ ಕೊಟ್ಟಿರಬಹುದು ಎಂದರು.

ಅಲ್ಲದೇ, ಸಚಿವ ಸ್ಥಾನ ಸಿಗದ ನಮ್ಮ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ರಾಜಕಾರಣದಲ್ಲಿ ಯಾರೂ ಕೂಡ ಸನ್ಯಾಸಿಗಳಲ್ಲ. ಮುನಿಸಿಕೊಂಡ ಹಲವರಿಗೆ ಮುಂದಿನ‌ ದಿನಗಳಲ್ಲಿ ಸಚಿವ ಸ್ಥಾನ ಸಿಗಲಿದೆ. ನೆರೆಪೀಡಿತ ಪ್ರದೇಶವಾದ ಗೋಕಾಕಿಗೆ ನಾಳೆ ಭೇಟಿ ನೀಡುತ್ತಿದ್ದೇನೆ. ರಮೇಶ ಜಾರಕಿಹೊಳಿ ಅವರನ್ನು ಆಹ್ವಾನಿಸಲು ಅವರ ನಿವಾಸಕ್ಕೆ ಹೋಗಿದ್ದೆ. ನನ್ನದು ಬೇರೆ ಕೆಲಸ ಇದೆ. ನೀವು ವೀಕ್ಷಣೆ ಮಾಡುವಂತೆ ರಮೇಶ್ ಹೇಳಿದ್ದಾರೆ ಎಂದರು.

ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲು ಪ್ರಥಮ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಸಚಿವರು ಹದಿನೇಳು ಜಿಲ್ಲೆಗಳಿಗೆ ಹೋಗಿ ಸಿಎಂಗೆ ಅಧ್ಯಯನ ವರದಿ ನೀಡುತ್ತೇವೆ. ಬಳಿಕ ಈ ಅಧ್ಯಯನ ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ. ಎರಡು ದಿನಗಳಲ್ಲಿ ಅಧ್ಯಯನ ಪೂರ್ಣಗೊಳ್ಳಲಿದೆ. ತುರ್ತಾಗಿ ಒಂದು ಕುಟುಂಬಕ್ಕೆ ಅವಶ್ಯಕ ವಸ್ತುಗಳ ಖರೀದಿಗೆ ಹತ್ತು ಸಾವಿರ ನೀಡಲಾಗುತ್ತೆ. ಎಷ್ಟು ಬೆಳೆ ಹಾನಿಯಾಗಿದೆ ಮತ್ತು ಅದಕ್ಕೆ ಎಷ್ಟು ಪರಿಹಾರ ನೀಡಬೇಕೆಂದು ನಂತರದಲ್ಲಿ ವರದಿ ಸಲ್ಲಿಕೆ ಆಗಲಿದೆ ಎಂದರು.

ABOUT THE AUTHOR

...view details