ಬೆಳಗಾವಿ:ಆಸ್ತಿ ಕಸಿದುಕೊಳ್ಳುವುದರ ಜೊತೆಗೆ ಮಕ್ಕಳ ಹಾಗೂ ಸೊಸೆಯಂದಿರ ನಿರಂತರ ಕಿರುಕುಳಕ್ಕೆ ಬೇಸತ್ತು 80 ವರ್ಷದ ವೃದ್ಧೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಹತ್ನಿಸಿದ ಘಟನೆ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ ಗ್ರಾಮದ ಬಳಿ ನಡೆದಿದೆ.
ಆಸ್ತಿ ಕಸಿದು ಕಿರುಕುಳ ಕೊಟ್ಟ ಮಕ್ಕಳು, ಸೊಸೆಯಂದಿರು: ನದಿಗೆ ಹಾರಿ ಆತ್ಮಹತ್ಯಗೆ ಯತ್ನಿಸಿದ 80ರ ವೃದ್ಧೆ - ಎಂ.ಚಂದರಗಿ ಗ್ರಾಮದ ನಿವಾಸಿ ಯಲ್ಲವ್ವ ಕೌಜಲಗಿ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ.ಚಂದರಗಿ ಗ್ರಾಮದ ನಿವಾಸಿ ಯಲ್ಲವ್ವ ಕೌಜಲಗಿ(80) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಅಜ್ಜಿಯನ್ನು ಕಿಲ್ಲಾ ತೊರಗಲ್ ಗ್ರಾಮಸ್ಥರು ರಕ್ಷಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ.ಚಂದರಗಿ ಗ್ರಾಮದ ನಿವಾಸಿ ಯಲ್ಲವ್ವ ಕೌಜಲಗಿ(80) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಅಜ್ಜಿಯನ್ನು ಕಿಲ್ಲಾ ತೊರಗಲ್ ಗ್ರಾಮಸ್ಥರು ರಕ್ಷಿಸಿದ್ದಾರೆ.
ವೃದ್ಧೆ ಯಲ್ಲವ್ವ ಕೌಜಲಗಿ ಅವರಿಗೆ ಮೂವರು ಪುತ್ರರಿದ್ದಾರೆ. ಮಕ್ಕಳು- ಸೊಸೆಯಂದಿರು ಸೇರಿ ಅಜ್ಜಿಯ ಆಸ್ತಿ ಕಸಿದುಕೊಂಡು ಮನೆಯಿಂದ ಹೊರದಬ್ಬಿದ್ದಾರೆ. ಬೀದಿಗೆ ಬಿದ್ದ ಅಜ್ಜಿ ಮೂರು ದಿನಗಳಿಂದ ಊಟ ಮಾಡಿಲ್ಲ. ಮಕ್ಕಳ ಕ್ರೂರ ವರ್ತನೆಗೆ ಬೇಸತ್ತು ಯಲ್ಲವ್ವ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.