ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಜನರ ಸಮಸ್ಯೆಯನ್ನು ಆಲಿಸಿ ಅವರಿಗೆ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಡುಗಡ್ಡೆಯಾದ ಇಂಗಳಿ ಗ್ರಾಮಕ್ಕೆ ಅಧಿಕಾರಿಗಳು: ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ - ಚಿಕ್ಕೋಡಿ ಮಳೆ
ಮಹಾರಾಷ್ಟ್ರದಲ್ಲಿ ನಿಲ್ಲದ ವರುಣನ ಆರ್ಭಟದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬೆಳಗಾವಿಯ ಇಂಗಳಿ ಗ್ರಾಮದ ನಡುಗಡ್ಡೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರುವುದಾಗಿ ಹೇಳಿದರು.
ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ
ಚಿಕ್ಕೋಡಿಯ ಎಸಿ ರವಿಂದ್ರ ಕರಲಿಂಗನವರ ಅವರ ನೇತೃತ್ವದಲ್ಲಿ ಚಿಕ್ಕೋಡಿ ತಹಸೀಲ್ದಾರ ಸಂತೋಷ ಬಿರಾದರ ಹಾಗೂ ಎಸ್ಡಿಆರ್ಎಫ್ ತಂಡದಿಂದ ನಡುಗಡ್ಡಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಶೀಲಿಸಿದರು.
ಎರಡು ಬೋಟ್ಗಳೊಂದಿಗೆ ಬಂದಿದ್ದ ಎಸ್ಡಿಆರ್ಎಫ್ ತಂಡ, ಮುಂಜಾಗ್ರತಾ ಕ್ರಮವಾಗಿ 20 ಸಿಬ್ಬಂದಿಯನ್ನು ಕರೆಸಿ ಇಂಗಳಿ ಹಾಗೂ ಸುತ್ತಮುತ್ತಲಿನ ನದಿ ತೀರದ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದರು. ಇನ್ನು ಈ ಭಾಗದ ಜನರಿಗೆ ಹೈ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.
Last Updated : Aug 2, 2019, 12:16 PM IST