ಕರ್ನಾಟಕ

karnataka

ನಿತ್ಯ 40 ಸೋಂಕಿತರ ಅಂತ್ಯಕ್ರಿಯೆ: ಬೆಳಗಾವಿಯಲ್ಲಿ ಕಟ್ಟಿಗೆಗಿಲ್ಲ ಅಭಾವ

By

Published : May 7, 2021, 7:15 AM IST

ಕಳೆದೊಂದು ವಾರದಿಂದ ನಿತ್ಯ 40ಕ್ಕೂ ಹೆಚ್ಚು ಸೋಂಕಿತರ ಅಂತ್ಯಕ್ರಿಯೆ ನಡೆಯುತ್ತಿದ್ದು, ಶವಸಂಸ್ಕಾರಕ್ಕೆ ಬಳಸುವ ಕಟ್ಟಿಗೆಯ ಅಭಾವ ಎದುರಾಗಿಲ್ಲ ಎಂದು ಕಟ್ಟಿಗೆ ಅಡ್ಡೆಗಳ ಮಾಲೀಕರು ಹೇಳುತ್ತಾರೆ.

Woods no shortage, Woods no shortage to cremation, Woods no shortage to cremation in Belagavi, Belagavi news, Belagavi corona news, ಶವಸಂಸ್ಕಾರಕ್ಕೆ ಬಳಸುವ ಕಟ್ಟಿಗೆಗೆ ಎದುರಾಗಿಲ್ಲ ಅಭಾವ, ಬೆಳಗಾವಿಯಲ್ಲಿ ಶವಸಂಸ್ಕಾರಕ್ಕೆ ಬಳಸುವ ಕಟ್ಟಿಗೆಗೆ ಎದುರಾಗಿಲ್ಲ ಅಭಾವ, ಬೆಳಗಾವಿ ಸುದ್ದಿ, ಬೆಳಗಾವಿ ಕೊರೊನಾ ಸುದ್ದಿ,
ಶವಸಂಸ್ಕಾರಕ್ಕೆ ಬಳಸುವ ಕಟ್ಟಿಗೆಗೆ ಎದುರಾಗಿಲ್ಲ ಅಭಾವ

ಬೆಳಗಾವಿ:ದಿನದಿಂದ ದಿನಕ್ಕೆ ಕೊರೊನಾ ‌ಸೋಂಕಿಗೆ ಮೃತಪಡುತ್ತಿರುವ ಸಂಖ್ಯೆ ‌ಹೆಚ್ಚುತ್ತಿದೆ. ಹೀಗಾಗಿ ರಾಜ್ಯದ ಹಲವೆಡೆ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಅಭಾವ ಉಂಟಾಗುತ್ತಿದೆ. ಆದರೆ ಬೆಳಗಾವಿಯಲ್ಲಿ ಶವ ಸಂಸ್ಕಾರಕ್ಕೆ ಯಾವುದೇ ರೀತಿಯಲ್ಲಿ ಕಟ್ಟಿಗೆಯ ಕೊರತೆ ಎದುರಾಗಿಲ್ಲ.

ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹಾಗೂ ಸಾಮಾನ್ಯ ರೋಗಿಗಳ ಅಂತ್ಯಸಂಸ್ಕಾರವನ್ನು ಇಲ್ಲಿ ನಡೆಸಲಾಗುತ್ತಿದೆ. ಸ್ಮಶಾನದ ಪಕ್ಕದಲ್ಲೇ ಕಟ್ಟಿಗೆಯ ಅಡ್ಡೆ ಇದ್ದು, ಈವರೆಗೆ ತೊಂದರೆಯಾಗಿಲ್ಲ.

ಮೊದಲಿನಿಂದಲೂ ಒಂದು ಟನ್ ಕಟ್ಟಿಗೆ ದರ 600 ರೂ ಇತ್ತು. ಮೃತರ ಸಂಖ್ಯೆ ‌ಹೆಚ್ಚಾದರೂ ಕಟ್ಟಿಗೆ ಕೊರತೆ ತಲೆದೋರಿಲ್ಲ. ಕಳೆದೊಂದು ವಾರದಿಂದ ನಿತ್ಯ 40‌ ಸೋಂಕಿತರು ಮೃತರಾಗುತ್ತಿದ್ದಾರೆ. ಸುಡುವ ಮೂಲಕವೇ ಎಲ್ಲ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಅಗತ್ಯಕ್ಕೂ ಹೆಚ್ಚು ಕಟ್ಟಿಗೆಯ ಸಂಗ್ರಹ ಮಾಡಲಾಗಿದೆ ಎಂದು ಕಟ್ಟಿಗೆ ಅಡ್ಡೆ ಮಾಲೀಕ ಜಗನ್ನಾತ ತಿಳಿಸಿದರು.

ABOUT THE AUTHOR

...view details