ಬೆಳಗಾವಿ :ಲಾಕ್ಡೌನ್ನಿಂದಾಗಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಬಹುರುಪಿ, ಚಿಗಲಕಾರ ಹಾಗೂ ಭೂವಿ ಹೀಗೆ ಹಲವಾರು ಅಲೆಮಾರಿ ಜನಾಂಗದವರಿಗೆ ಮೊರಬ ಗ್ರಾಮ ಪಂಚಾಯತ್ ವತಿಯಿಂದ ಅಗತ್ಯ ವಸ್ತುಗಳನ್ನ ನೀಡಲಾಯಿತು.
ಅಲೆಮಾರಿ ಜನಾಂಗದ ಹಸಿವು ನೀಗಿಸಿದ ಮೊರಬ ಗ್ರಾಮ ಪಂಚಾಯತ್.. - ರಾಯಬಾಗ ತಾಲೂಕಿನ ಮೊರಬ ಗ್ರಾಮ
ಲಾಕ್ಡೌನ್ ಪರಿಣಾಮ ಕೆಲಸಕ್ಕಾಗಿ ಹೊರಹೋಗಲು ಸಾಧ್ಯವಿಲ್ಲ. ಹೀಗಾಗಿ ಅಲೆಮಾರಿ ಜನಾಂಗದವರು ತುತ್ತು ಅನ್ನಕ್ಕೂ ಪರದಾಡುವಂತಾಗಿತ್ತು.
ಇವರು ದಿನನಿತ್ಯ ದಿನಕ್ಕೊಂದು ವೇಷಧರಿಸಿ ಬೇರೆ ಬೇರೆ ಗ್ರಾಮಗಳಿಗೆ ಹೋಗಿ ತಮ್ಮ ಕಲೆಯನ್ನ ಜನರ ಮುಂದೆ ಪ್ರದರ್ಶಿಸಿ,ಜನರು ಕೊಟ್ಟ ಹಣ ಹಾಗೂ ಆಹಾರ ಧಾನ್ಯಗಳನ್ನು ತಂದು ಜೀವನ ಸಾಗಿಸುತ್ತಿದ್ದರು. ಲಾಕ್ಡೌನ್ ಪರಿಣಾಮ ಕೆಲಸಕ್ಕಾಗಿ ಹೊರಹೋಗಲು ಸಾಧ್ಯವಿಲ್ಲ. ಹೀಗಾಗಿ ಅಲೆಮಾರಿ ಜನಾಂಗದವರು ತುತ್ತು ಅನ್ನಕ್ಕೂ ಪರದಾಡುವಂತಾಗಿತ್ತು.
ಇದನ್ನರಿತ ಮೊರಬ ಗ್ರಾಮ ಪಂಚಾಯತ್‌ನವರು ಅಕ್ಕಿ, ದಿನಸಿ ಸಾಮಾಗ್ರಿ, ತರಕಾರಿ, ಮಾಸ್ಕ್ಗಳು ಹಾಗೂ ಶುದ್ದ ಕುಡಿಯುವ ನೀರನ್ನ ವಿತರಿಸಿದರು. ಅಲೆಮಾರಿ ಜನರು ಸಹ ಒಬ್ಬೊಬ್ಬರಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೂಳ್ಳುವ ಮೂಲಕ ಸಾಮಾಗ್ರಿಗಳನ್ನು ಪಡೆದು ಮೊರಬ ಗ್ರಾಮ ಪಂಚಾಯತ್ ಅವರ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದರು.