ಅಥಣಿ(ಬೆಳಗಾವಿ): ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಹಲವು ಕಾಮಗಾರಿಗಳಿಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಭೂಮಿ ಪೂಜೆ ನೆರವೇರಿಸಿದರು.
ಅಥಣಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನಿಡಿದ ಶಾಸಕ ಮಹೇಶ್ ಕುಮಟಳ್ಳಿ ತಾಲೂಕಿನ ಬಡಕಂಬಿತೋಟ, ಸಿಂಡ್ ಫಾರ್ಮ್, ಮುರಗುಂಡಿ, ಮಸರಗುಪ್ಪಿ, ಹೊಸಟ್ಟಿ, ದೇವರಡ್ಡೆರಹಟ್ಟಿ, ಅಥಣಿ ಪಟ್ಟಣದ ಅಡಕರ ಕಾಲೋನಿ, ಬಡಚಿ, ಕಟಗೇರಿ, ಬುರ್ಲಟ್ಟಿ, ಗ್ರಾಮಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿದರು.
ಈ ವೇಳೆ ಕೊಳಗೇರಿ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷ ಮಹೇಶ್ ಕುಮಟಳ್ಳಿ ಮಾತನಾಡಿ, ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ 105 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರು ಮಾಡಿದ್ದು, 13 ಕೋಟಿ ರೂಪಾಯಿಯಲ್ಲಿ ಹಲವಾರು ಯೋಜನೆಗಳ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪನವರು ಅಥಣಿ ಜನರ ಮೇಲೆ ಅತೀವ ಪ್ರೀತಿ ಇಟ್ಟು ಅನುದಾನ ನೀಡಿದ್ದು, ಯೋಜನೆಗಳು ಸರಾಗವಾಗಿ ರೂಪ ಪಡೆಯಲಿವೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ಅಥಣಿ ಭಾಗಕ್ಕೆ ನೀರಾವರಿ ಯೋಜನೆ ಕಾಮಗಾರಿಗಳು ಪ್ರಾರಂಭವಾಗಿವೆ. ಕ್ಷೇತ್ರದಲ್ಲಿ ಹಲವಾರು ಬೇಡಿಕೆಗಳು ಇರುವುದರಿಂದ ಅದಕ್ಕನುಗುಣವಾಗಿ ಜಾರಿ ಮಾಡಲಾಗುವುದು ಎಂದು ಹೇಳಿದರು.