ನಾವೇನು ಕೈಕಟ್ಟಿ ಕುಳಿತಿಲ್ಲ.. ಮಹಾರಾಷ್ಟ್ರ ಸಿಎಂ ಠಾಕ್ರೆಗೆ ಸಚಿವೆ ಜೊಲ್ಲೆ ಖಡಕ್ ಎಚ್ಚರಿಕೆ
ಉದ್ಧವ್ ಠಾಕ್ರೆ ಪದೇ ಪದೆ ಮಾತಾಡಿದ್ರೆ, ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಏನ್ ಮಾಡ್ಬೇಕೋ, ಮಾಡುತ್ತೇವೆ. ಠಾಕ್ರೆಗೆ ಬೆಳಗಾವಿ ಬಗ್ಗೆ ಮಾತನಾಡುವ ಅಧಿಕಾರ ಎಳ್ಳಷ್ಟೂ ಇಲ್ಲ. ಗಡಿ ಸಂಘರ್ಷದ ಕುರಿತು ಪುಸ್ತಕ ಬಿಡುಗಡೆ ಮಾಡ್ತಾರೆ. ನಮ್ಮ ಬಳಿಯೂ ಸಾಕಷ್ಟು ದಾಖಲೆಗಳಿದ್ದು, ನಾವೂ ಉತ್ತರ ಕೊಡುತ್ತೇವೆ ಎಂದು ಸಚಿವೆ ಶಶಿಕಲಾ ಖಡಕ್ ಸಂದೇಶ ರವಾನಿಸಿದ್ದಾರೆ.
ನಾವೇನು ಕೈಕಟ್ಟಿ ಕುಳಿತಿಲ್ಲ
ಚಿಕ್ಕೋಡಿ :ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿಕೊಳ್ಳುತ್ತೇವೆ ಎಂದರೆ ನಾವೇನು ಕೈಕಟ್ಟಿ ಕುಳಿತುಕೊಂಡಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಗುಡುಗಿದರು.
ಸಿಎಂ ಉದ್ಧವ್ ಠಾಕ್ರೆ ಪದೇಪದೆ ಮಾತಾಡಿದ್ರೆ, ನಾವು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಏನ್ ಮಾಡ್ಬೇಕೋ, ಮಾಡುತ್ತೇವೆ. ಠಾಕ್ರೆಗೆ ಬೆಳಗಾವಿ ಬಗ್ಗೆ ಮಾತನಾಡುವ ಅಧಿಕಾರ ಎಳ್ಳಷ್ಟೂ ಇಲ್ಲ. ಗಡಿ ಸಂಘರ್ಷದ ಕುರಿತು ಪುಸ್ತಕ ಬಿಡುಗಡೆ ಮಾಡ್ತಾರೆ. ನಮ್ಮ ಬಳಿಯೂ ಸಾಕಷ್ಟು ದಾಖಲೆಗಳಿದ್ದು, ನಾವೂ ಉತ್ತರ ಕೊಡುತ್ತೇವೆ. ತಾಳ್ಮೆಯಿಂದ ನೋಡುತ್ತೇವೆ ಮಹಾರಾಷ್ಟ್ರದ ಉದ್ಧಟತನ ಪುನರಾವರ್ತನೆಯಾದರೆ, ಹಿರಿಯರ ಜತೆ ಚರ್ಚಿಸಿ ಸುಪ್ರೀಂ ಮೊರೆ ಹೋಗುತ್ತೇವೆ ಎಂದರು. ಇದೊಂದು ರಾಜಕೀಯ ಪ್ರೇರಿತ ಮಾತು. ಗಡಿಯಲ್ಲಿ ಮರಾಠಿ-ಕನ್ನಡ ಭಾಷಿಕರು ಅನ್ಯೋನ್ಯವಾಗಿದ್ದಾರೆ. ಬೆಳಗಾವಿ ಬಿಟ್ಟು ಕೊಡುವ ಯಾವುದೇ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.