ಕರ್ನಾಟಕ

karnataka

By

Published : Oct 19, 2020, 5:38 PM IST

Updated : Oct 19, 2020, 5:54 PM IST

ETV Bharat / state

ಕಾಟಾಚಾರಕ್ಕೆ ನೆರೆ ಸಂತ್ರಸ್ತ ಸ್ಥಳಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಆರ್. ಅಶೋಕ್​

ಸಚಿವ ಆರ್​. ಅಶೋಕ್ ಕೇವಲ ಬೋಟಿನಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ವೀಕ್ಷಣೆ ಮಾಡಿ ಬಳಿಕ ಬೆಳಗಾವಿಗೆ ತೆರಳಿದ್ದು, ನಮ್ಮ ಸಮಸ್ಯೆಗಳನ್ನು ಬಗೆ ಹರಿಸಿ, ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವ ನೀರಿಕ್ಷೆಯಲ್ಲಿದ್ದ ನೆರೆ ಸಂತ್ತಸ್ತರಿಗೆ ನಿರಾಸೆಯಾಗಿದೆ.

Minister R. Ashok
ಕಂದಾಯ ಸಚಿವ ಆರ್. ಅಶೋಕ

ಚಿಕ್ಕೋಡಿ‌ : ಪ್ರವಾಹಕ್ಕೀಡಾದ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಅಳಲನ್ನು ಕೇಳಬೇಕಾದ ಸಚಿವರು ಇಂದು ಚಿಕ್ಕೋಡಿ ಉಪವಿಭಾಗದಲ್ಲಿ ಕಾಟಾಚಾರಕ್ಕೆ ನೆರೆ ಸಂತ್ರಸ್ತರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಕುಂಭದ್ರೋಣ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಧಾನ್ಯಗಳು ನೀರಿನಲ್ಲಿ ಹಾಳಾಗಿದ್ದರೆ, ಇನ್ನು ಕೆಲ ಜನರ ಮನೆಗಳ ಗೋಡೆ ಕುಸಿತಗೊಂಡಿವೆ. ಈ ಸ್ಥಳಗಳನ್ನ ವೀಕ್ಷಿಸಿ ಪರಶೀಲಿಸಿ ಪರಿಹಾರ ನೀಡಬೇಕಾದ ಸಚಿವ ಆರ್. ಅಶೋಕ್​ ಅವರು ಕಾಟಾಚಾರಕ್ಕೆ ಭೇಟಿ ನೀಡಿದಂತಾಗಿದೆ.

ಹುಕ್ಕೇರಿ ಬಳಿಕ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಕೃಷ್ಣಾ ನದಿಗೆ ಭೇಟಿ ನೀಡಿದ ಕಂದಾಯ ಸಚಿವರಿಗೆ, ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಜೊಳಿ, ಮಹಾಂತೇಶ ಕವಟಗಿಮಠ, ಪಿ.ರಾಜೀವ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸಾಥ್ ನೀಡಿದರು.

Last Updated : Oct 19, 2020, 5:54 PM IST

ABOUT THE AUTHOR

...view details