ಬೆಳಗಾವಿ:ಪ್ರವಾಹದ ಪರಿಣಾಮ ಸಿಂಡಿಕೇಟ್ ಬ್ಯಾಂಕ್ನೊಳಗೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ಹಣ, ದಾಖಲೆ ಪತ್ರಗಳು ಹಾಗೂ ಪೀಠೋಪಕರಣಗಳು ನೀರಿಗೆ ಆಹುತಿಯಾಗಿವೆ.
ಸವದತ್ತಿಯಲ್ಲಿ ಬ್ಯಾಂಕ್ಗೆ ನುಗ್ಗಿದ ನೀರು... ಲಕ್ಷಾಂತರ ರೂಪಾಯಿ ಆಹುತಿ!
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿನ ಸಿಂಡಿಕೇಟ್ ಬ್ಯಾಂಕ್ ಶಾಖೆಯು ಮಲಪ್ರಭಾ ನದಿಯ ಪ್ರವಾಹಕ್ಕೆ ಜಲಾವೃತಗೊಂಡಿತ್ತು. ಪರಿಣಾಮ ಬ್ಯಾಂಕ್ನಲ್ಲಿದ್ದ ಲಕ್ಷಾಂತರ ರೂಪಾಯಿ ನೀರಲ್ಲಿ ಮುಳಗಿತ್ತು.
ನೀರಲ್ಲಿ ಮುಳುಗಿದ ಲಕ್ಷಾಂತರ ರೂಪಾಯಿ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ಶಾಖೆಯಲ್ಲಿ ಈ ಘಟನೆ ನಡೆದಿದೆ.ಮಲಪ್ರಭಾ ನದಿಯ ಪ್ರವಾಹದಿಂದ ಮುನವಳ್ಳಿ ಗ್ರಾಮ ಸಂಪೂರ್ಣ ಮುಳುಗಡೆ ಆಗಿತ್ತು. ಸ್ಥಳೀಯ ಬ್ಯಾಂಕಿಗೆ ನೀರು ನುಗ್ಗಿದ್ದು, ಬ್ಯಾಂಕ್ನಲ್ಲಿದ್ದ ಎರಡು ಸಾವಿರ, ಐದುನೂರು, ನೂರು, ಇನ್ನೂರು ರೂ. ಮುಖಬೆಲೆಯ ಲಕ್ಷಾಂತರ ಹಣ ನೀರಲ್ಲಿ ಕೊಚ್ಚಿ ಹೋಗಿದೆ. ಅಲ್ಲದೇ ಶಾಖೆಯ ಕಂಪ್ಯೂಟರ್, ಸಾಲ ನೀಡಿದ ಪ್ರಮುಖ ದಾಖಲೆಗಳು ನೀರಿಲ್ಲಿ ಮುಳಗಿವೆ. ಕಳೆದ ವಾರ ಈ ಘಟನೆ ನಡೆದಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.