ಕರ್ನಾಟಕ

karnataka

ETV Bharat / state

ತುಂಬಿ ಹರಿಯುತ್ತಿರುವ ಮಲಪ್ರಭೆ : ರಾಮದುರ್ಗದಲ್ಲಿ ಮತ್ತೆ ಪ್ರವಾಹ ಭೀತಿ - ರಾಮದುರ್ಗ ಗ್ರಾಮ

ಕಳೆದ ಕೆಲವು ದಿನಗಳ ಹಿಂದೆ ಉಂಟಾದ ಭೀಕರ ಪ್ರವಾಹಕ್ಕೆ ಕುಂದಾನಗರಿಯ ಜನತೆ ತತ್ತರಿಸಿದ್ದರು. ಮತ್ತೆ ಜಿಲ್ಲೆಯ ಮಲಪ್ರಭಾ ನದಿ ತೀರದ ತಾಲೂಕುಗಳಲ್ಲಿ ಮತ್ತೆ ಪ್ರವಾಹದ ಭೀತಿ ಉಂಟಾಗಿದೆ. ಖಾನಾಪುರ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು ರಾಮದುರ್ಗ ತಾಲೂಕಿನ‌ ಸೇತುವೆಗಳು ಜಲಾವೃತವಾಗಿವೆ.

ತುಂಬಿ ಹರಿಯುತ್ತಿರುವ ಮಲಪ್ರಬಾ ನದಿ

By

Published : Sep 5, 2019, 11:11 AM IST

ಬೆಳಗಾವಿ:ಕಳೆದ ಕೆಲವು ದಿನಗಳ ಹಿಂದೆ ಉಂಟಾದ ಭೀಕರ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿ ತೀರದ ತಾಲೂಕುಗಳಲ್ಲಿ ಮತ್ತೆ ಪ್ರವಾಹದ ಭೀತಿ ಉಂಟಾಗಿದೆ. ಖಾನಾಪುರ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು ರಾಮದುರ್ಗ ತಾಲೂಕಿನ‌ ಸೇತುವೆಗಳು ಜಲಾವೃತವಾಗಿವೆ.

ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಮಲಪ್ರಭಾ ನದಿಯ ಒಳ ಹರಿವು ಜಾಸ್ತಿಯಾಗಿದೆ. ರಾಮದುರ್ಗ ಸುರೇಬಾನ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಹಳೆಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಪ್ರವಾಹದ ಭೀತಿ ಉಂಟಾಗಿದೆ. ನಿನ್ನೆ ಮಲಪ್ರಭಾ ನದಿಗೆ 4 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗಿದ್ದು, ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದೆ.

ABOUT THE AUTHOR

...view details