ಬೆಳಗಾವಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿಯಲ್ಲಿರುವ ಕನ್ನಡ ಜನರ ಪರ ನಿಲ್ಲಬೇಕು. ನಿಲ್ಲದಿದ್ದರೆ ಬೆಳಗಾವಿಗೆ ಬಂದಾಗ ಪ್ರತಿಭಟನಾ ಬಿಸಿ ಎದುರಿಸಬೇಕಾಗುತ್ತದೆ ಎಂದು ಬೆಳಗಾವಿಯ ಜಿಲ್ಲಾ ಕನ್ನಡಪರ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಎಚ್ಚರಿಕೆ ನೀಡಿದ್ದಾರೆ.
ಗಡಿಯಲ್ಲಿ ನಡೆಯುತ್ತಿರುವ ಘರ್ಷಣೆ ಕುರಿತು ಹೇಳಿನೆ ನೀಡಿರುವ ಅವರು, ಜತ್ತ, ಅಕ್ಕಲಕೋಟ ಕರ್ನಾಟಕಕ್ಕೆ ಸೇರಬೇಕು ಅಂತ ಹೇಳಿ ಇಲ್ಲಿಯ ಕನ್ನಡಿಗರನ್ನು ಹುಚ್ಚೆದ್ದು ಕುಣಿಸಿದ್ದೀರಿ. ನಿಮ್ಮ ಮಾತು ಕೇಳಿ ಜತ್ತ ಕನ್ನಡಿಗರು ಒಪ್ಪಿಕೊಂಡಿದ್ದಾರೆ. ನಿಮ್ಮ ಒಂದೇ ಒಂದು ಹೇಳಿಕೆಯಿಂದ ಇಲ್ಲಿ ಕನ್ನಡಪರ ವಾತಾವರಣ ಸೃಷ್ಟಿಯಾಗಿದೆ. ಇದನ್ನು ತಡೆದುಕೊಳ್ಳಲಾಗದ ಮಹಾರಾಷ್ಟ್ರ ಸರ್ಕಾರ ಕನ್ನಡಿಗರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ.
ಆದರೆ, ಕರ್ನಾಟಕ ಸರ್ಕಾರ ಇವರನ್ನು ನಡುನೀರಿನಲ್ಲಿ ಬಿಡುತ್ತಿದೆ ಎಂಬ ಸಂಶಯ ಸಹ ಕಾಡುತ್ತಿದೆ. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರ ಜೊತೆ ಇಬ್ಬರು ಸಚಿವರನ್ನು ಮಹಾರಾಷ್ಟ್ರಕ್ಕೆ ಕಳುಹಿಸಬೇಕು. ತಾವು ಯಾವುದೇ ಕಾರಣಕ್ಕೂ ಮೌನ ವಹಿಸಿಬಾರದು ಎಂದಿದ್ದಾರೆ.