ಅಥಣಿ :ಮಹೇಶ್ ಕುಮಟಳ್ಳಿ ಹುಟ್ಟಿದ ಊರಿಗೆ ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುತ್ತೀರಿ..? ಅವರೊಬ್ಬ ಸ್ವಾರ್ಥ ರಾಜಕಾರಣಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಹೇಶ್ ಕುಮಟಳ್ಳಿ ಸ್ವಾರ್ಥ ರಾಜಕಾರಣಿ : ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ
ಮಹೇಶ್ ಕುಮಟಳ್ಳಿ ತೇಲಸಂಗ ಗ್ರಾಮದ ಮಗ. ಆದರೆ ನಿಮ್ಮ ಊರಿಗೆ ಎಷ್ಟು ಸಲ ಬಂದ್ರು? ಗ್ರಾಮದಲ್ಲಿ ಎಷ್ಟು ಅನುದಾನದ ಕೆಲಸ ಮಾಡಿದ್ದಾರೆ? ಹುಟ್ಟಿದ ಊರಿಗೆ, ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುತ್ತಾರೆ ಎಂದು ಕುಮಟಳ್ಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಹರಿಹಾಯ್ದಿದ್ದಾರೆ.
ಅಥಣಿ ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಮಹೇಶ್ ಕುಮಟಳ್ಳಿ ತೇಲಸಂಗ ಗ್ರಾಮದ ಮಗ. ಆದರೆ ನಿಮ್ಮ ಊರಿಗೆ ಎಷ್ಟು ಭಾರಿ ಬಂದ್ರು? ಗ್ರಾಮದಲ್ಲಿ ಎಷ್ಟು ಅನುದಾನ ಕೆಲಸ ಮಾಡಿದ್ದಾರೆ? ಹುಟ್ಟಿದ ಊರಿಗೆ, ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುವೀರಿ? ನಿಮಗೆ ನಿವು ಉಪಕಾರ ಮಾಡುಕ್ಕೋಳ್ಳತ್ತಿರೀ. ನೀವು ಸ್ವಾರ್ಥಿ ಎಂದು ಕುಮಟಳ್ಳಿ ವಿರುದ್ಧ ಹರಿಹಾಯ್ದಿದ್ದರು.
ನೆರೆ ಬಂದಾಗ ಗರಿಗರಿಯಾದ ಬಟ್ಟೆ ತೊಟ್ಟು ಬಾಂಬೆಯಲ್ಲಿ ಕೈಯಲ್ಲಿ ಮೊಬೈಲ್ ಹಿಡಿದು ತಿರುಗಾಡಿದ್ದನ್ನ ನಾವೆಲ್ಲರೂ ನೋಡಿದ್ದೇವೆ. ಲಕ್ಷ್ಮಣ್ ಸವದಿಯ ಮುಂದಿನ ಭವಿಷ್ಯ ಏನು? ಅವರಿಗೂ ಮೋಸ ಮಾಡುತ್ತಾರೆ ಈ ಅನರ್ಹ ಶಾಸಕರು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಕಾಲೆಳೆದರು.