ಬೆಳಗಾವಿ: ಕರ್ತವ್ಯಕ್ಕೆ ಬರದೇ ಇರುವ ಸಾರಿಗೆ ಇಲಾಖೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ಡಿಸಿ ಎಂ.ಆರ್. ಮುಂಜಿ ಹೇಳಿದರು.
ಕರ್ತವ್ಯಕ್ಕೆ ಬರದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ಕೆಎಸ್ಆರ್ಟಿಸಿ ಜಿಲ್ಲಾಧಿಕಾರಿ ಎಂ.ಆರ್. ಮುಂಜಿ
ಸಾರಿಗೆ ಇಲಾಖೆ ಸಿಬ್ಬಂದಿ ಕರ್ತವ್ಯಕ್ಕೆ ಬಂದ್ರೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬಸ್ಗಳನ್ನು ಬಿಡಲಾಗುತ್ತದೆ. ಬರಲಿಲ್ಲ ಅಂದ್ರೆ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಡಿಸಿ ಎಂ.ಆರ್. ಮುಂಜಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಎಂಟು ಬೇಡಿಕೆಗಳನ್ನು ಈಡೇರಿಸಲಾಗಿದೆ. ಹೀಗಾಗಿ ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ಕೊರೊನಾ ಸಂದರ್ಭದಲ್ಲೂ ಸರ್ಕಾರದ ಒಂಬತ್ತು ತಿಂಗಳು ಅನುದಾನ ನೀಡಿದೆ. ಅದನ್ನ ತಿಳಿದುಕೊಂಡು ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು. ನಮ್ಮ ಬೇಡಿಕೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಈಡೇರಿಸಲಿದೆ. ಕೋವಿಡ್, ಚುನಾವಣಾ ಇರುವ ಕಾರಣ ಪ್ರತಿಭಟನೆ ಕೈಬಿಟ್ಟು ದಯವಿಟ್ಟು ಕರ್ತವ್ಯ ಹಾಜರಾಗಬೇಕು ಎಂದು ಹೇಳಿದ್ರು.
ಒಂದು ವೇಳೆ ಕರ್ತವ್ಯಕ್ಕೆ ಬರದೇ ಇದ್ದರೆ ಅಂತಹ ಸಾರಿಗೆ ಇಲಾಖೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಕರ್ತವ್ಯಕ್ಕೆ ಬಂದ್ರೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬಸ್ಗಳನ್ನು ಬಿಡಲಾಗುತ್ತದೆ. ಕರ್ತವಕ್ಕೆ ಮರಳುವ ಸಿಬ್ಬಂದಿಗೆ ಸಹಕಾರ ನೀಡಲಾಗುತ್ತದೆ ಎಂದರು.