ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಗೆ 33,000 ಕ್ಯೂಸೆಕ್‌ ನೀರಿನ ಒಳ ಹರಿವು - krishna river

ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಸದ್ಯ ಕೃಷ್ಣಾ ನದಿ ಒಳ ಹರಿವು33,000 ಕ್ಯೂಸೆಕ್‌ಕ್ಕಿಂತ ಹೆಚ್ಚಾಗಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಮಾಹಿತಿ ನೀಡಿದ್ದಾರೆ.

krishna river water level
ಕೃಷ್ಣಾ ನದಿ ಒಳ ಹರಿವು

By

Published : Sep 5, 2020, 5:15 PM IST

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದ್ದು ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲೂ ಇಳಿಮುಖ ಕಂಡಿದೆ.

ಕೃಷ್ಣಾ ನದಿ ಒಳ ಹರಿವು 33,000 ಕ್ಯೂಸೆಕ್‌ಕ್ಕಿಂತ ಹೆಚ್ಚು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ ಸುಭಾಸ ಸಂಪಗಾಂವಿ ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ಕೃಷ್ಣಾ ನದಿ ಒಳ ಹರಿವು
ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 29,775 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 3,832 ಕ್ಯೂಸೆಕ್ ನೀರು ಹೀಗೆ ಒಟ್ಟು 33,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.
ಮಹಾರಾಷ್ಟ್ರದ ಕೊಯ್ನಾ - 00 ಮಿ.ಮೀ, ನವಜಾ - 00 ಮಿ.ಮೀ, ಮಹಾಬಲೇಶ್ವರ - 00 ಮಿ.ಮೀ, ವಾರಣಾ - 00 ಮಿ.ಮೀ, ಕಾಳಮ್ಮವಾಡಿ - 3 ಮಿ.ಮೀ, ರಾಧಾನಗರಿ - 17 ಮಿ.ಮೀ, ಪಾಟಗಾಂವ - 09 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ 98%, ವಾರಣಾ ಜಲಾಶಯ 98%, ರಾಧಾನಗರಿ ಜಲಾಶಯ 95%, ಕಣೇರ ಜಲಾಶಯ 99%, ಧೂಮ ಜಲಾಶಯ 98%, ಪಾಟಗಾಂವ 100% ಧೂದಗಂಗಾ 99%, ತುಂಬಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 37,000 ಹಾಗೂ ಆಲಮಟ್ಟಿ ಜಲಾಶಯದಿಂದ 37,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

ABOUT THE AUTHOR

...view details