ಕರ್ನಾಟಕ

karnataka

ETV Bharat / state

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದ ಆರೋಪಿಗೆ NET ಪರೀಕ್ಷೆಯಲ್ಲಿ 46ನೇ ರ‍್ಯಾಂಕ್

ಇಬ್ಬರು ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ಸ್‌ ಡಿವೈಸ್ ನೀಡಿ ಸಹಕರಿಸಿದ್ದ ಗಂಭೀರ ಆರೋಪ ಈ ಅಭ್ಯರ್ಥಿಯ ಮೇಲಿದೆ. ಇದೀಗ ಇವರು ರಾಜ್ಯಶಾಸ್ತ್ರ ವಿಷಯದಲ್ಲಿ ನೆಟ್(NET) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Accused Adesha
ಆರೋಪಿ ಆದೇಶ

By

Published : Sep 11, 2022, 1:21 PM IST

ಬೆಳಗಾವಿ:ಗೋಕಾಕ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದ ಆರೋಪಿಯೊಬ್ಬ ನೆಟ್ ಪರೀಕ್ಷೆಯಲ್ಲಿ 46ನೇ ರ‍್ಯಾಂಕ್ ಪಡೆದಿದ್ದಾರೆ. ಕಳೆದ ಆಗಸ್ಟ್ 7ರಂದು ಗೋಕಾಕ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಇವರು ಇದೀಗ ನೆಟ್ ಪರೀಕ್ಷೆಯಲ್ಲಿ 46ನೇ ರ‍್ಯಾಂಕ್ ಪಡೆದರೂ ಸಂಭ್ರಮಿಸದ ಪರಿಸ್ಥಿತಿ ಉದ್ಭವಿಸಿದೆ.

ಹುಕ್ಕೇರಿ ತಾಲೂಕಿನ ಶಿರಹಟ್ಟಿ ನಿವಾಸಿ ಆದೇಶ ನಾಗನೂರಿ ಸರ್ಕಾರಿ ‌ಕಾಲೇಜಿನ‌ ಅತಿಥಿ ಉಪನ್ಯಾಸಕರಾಗಿದ್ದರು. ಇವರೀಗ ರಾಜ್ಯಶಾಸ್ತ್ರ ವಿಷಯದಲ್ಲಿ ನೆಟ್ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಆದರೆ, ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪ ಇವರ ಮೇಲಿದೆ. ಪರೀಕ್ಷಾ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್‌ ಡಿವೈಸ್ ನೀಡಿದ್ದ ಗಂಭೀರ ಆರೋಪ ಆದೇಶ ಎದುರಿಸುತ್ತಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಬೆಳಗಾವಿ ಎಸ್ಪಿ ಡಾ.ಸಂಜೀವ ಪಾಟೀಲ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಸಿಟಿವಿಯಿಂದ ಕೃತ್ಯ ಬಯಲು

ABOUT THE AUTHOR

...view details