ಬೆಳಗಾವಿ: ಉಪಚುನಾವಣೆ ಸಂದರ್ಭದಲ್ಲಿ ನಮಗೆ ಡಿಸ್ಟರ್ಬ್ ಮಾಡಲೆಂದೇ ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಸಿಬಿಐ ದಾಳಿ ಪೂರ್ವ ನಿಯೋಜಿತ, ಇದನ್ನು ಎದುರಿಸಲು ಡಿಕೆಶಿ ಸಮರ್ಥರಿದ್ದಾರೆ: ಸತೀಶ್ ಜಾರಕಿಹೊಳಿ - KPCC Working president Satish Jarakiholi
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿಬಿಐ ದಾಳಿ ಎದುರಿಸಲು ಸಮರ್ಥರಿದ್ದಾರೆ. ಉಪ ಚುನಾವಣೆ ಹಿನ್ನೆಲೆ ಬಿಜೆಪಿಯವರು ಈ ರೀತಿ ದಾಳಿ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸುದ್ದಿ
ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ದಾಳಿಯು ಪೂರ್ವನಿಯೋಜಿತ. ಇದೇನು ಹೊಸ ವಿಷಯವೇನಲ್ಲ. ಕೇಂದ್ರ ಸರ್ಕಾರ ತನ್ನ ಅಂಗ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಆರೋಪ ಮಾಡಿದ್ದೇವೆ ಎಂದರು.
ಉಪಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತೊಂದರೆ ಕೊಡುತ್ತಿದ್ದಾರೆ. ಆದರೆ ನಮ್ಮ ಪಕ್ಷ ದೊಡ್ಡದು, ಒಂದೇ ವ್ಯಕ್ತಿಯಿಂದ ಪಕ್ಷ ಇರಲ್ಲ. ಇಡೀ ಪಕ್ಷವೇ ದೊಡ್ಡದಾಗಿದೆ. ಅವರನ್ನು ಯಾರೂ ಹೆದರಿಸಲಿಕ್ಕಾಗಲ್ಲ. ಸಿಬಿಐ ದಾಳಿ ಎದುರಿಸುವ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗಿದೆ ಎಂದು ಹೇಳಿದರು.