ಬೆಳಗಾವಿ:ಸವದತ್ತಿ ಪಟ್ಟಣದಲ್ಲಿ ನಡೆದ ಜೆಸಿಬಿ ಆಪರೇಟರ್ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಸ್ನೇಹಿತನ್ನು ಕೊಲೆಗೈದ ಆರೋಪಿ ಅಂದರ್ - belagavi
ಸವದತ್ತಿ ಪಟ್ಟಣದಲ್ಲಿ ನಡೆದ ಜೆಸಿಬಿ ಆಪರೇಟರ್ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ನೇಹಿತನ್ನು ಕೊಲೆಗೈದ ಆರೋಪಿ ಅಂದರ್
ಸವದತ್ತಿ ತಾಲೂಕಿನ ಕತ್ರಾಳ ಗ್ರಾಮದ ಅರ್ಜುನ್ ಕೋಳಿ ಬಂಧಿತ.ಮೃತ ಶ್ರೀಕಾಂತ ಕಳ್ಳಿಮನಿ ಹಾಗೂ ಅರ್ಜುನ್ ಇಬ್ಬರೂ ಆತ್ಮೀಯ ಸ್ನೇಹಿತರು. ಶ್ರೀಕಾಂತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ಸಂಬಂಧ ನಿನ್ನೆ ತಡರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಆಕ್ರೋಶಗೊಂಡ ಅರ್ಜುನ್ ಶ್ರೀಕಾಂತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ಕತ್ರಾಳ ಗ್ರಾಮಕ್ಕೆ ಹೋಗಿದ್ದನು. ಪ್ರಕರಣ ಒಂದೇ ದಿನದಲ್ಲಿ ಭೇದಿಸುವಲ್ಲಿ ಸವದತ್ತಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.