ಚಿಕ್ಕೋಡಿ: ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಯಾವುದೇ ಕಹಿ ಅನುಭವ ಆಗಿಲ್ಲ ಎಂದು ಚಿಕ್ಕೋಡಿ- ಸದಲಗಾ ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ ಪಟ್ಟಣದಲ್ಲಿ ಗಾಂಧೀಜಿ- ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಯಾರಿಂದಲೂ ತೊಂದರೆಯಾಗಿಲ್ಲ, ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ ಅವರು ಸ್ಪಂದಿಸಿದ್ದಾರೆ ಎಂದರು.
ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಸಚಿವರು ಕ್ಷೇತ್ರದ ಅಭಿವೃದ್ಧಿ ಸ್ಪಂದಿಸಿಲ್ಲ ಎಂಬ ಹೇಳಿಕೆ ವಿಚಾರವಾಗಿ ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲರ ಅನುಭವ ನನಗಾಗಿಲ್ಲ ಎಂದರು.
ಚಿಕ್ಕೋಡಿ ಜಿಲ್ಲಾ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ವಿಭಜನೆಗೊಂಡು ಚಿಕ್ಕೋಡಿ ಜಿಲ್ಲೆ ರಚನೆಯಾಗಲೇ ಬೇಕು, ಸಿದ್ದರಾಮಯ್ಯ ಸಿಎಂ ಇದ್ದಾಗ ಜಿಲ್ಲಾ ರಚನೆಗಾಗಿ ನಿಯೋಗ ಹೋಗಲಾಗಿತ್ತು, ಸ್ವಾಮೀಜಿಯವರು ಸೇರಿದಂತೆ ಜಿಲ್ಲಾ ಹೋರಾಟ ಸಮಿತಿ ಮುಖಂಡರ ನಿಯೋಗ ತಮ್ಮ ನೇತೃತ್ವದಲ್ಲಿ ಹೋಗಿತ್ತು, ಆಗ ವಿರೋಧ ಪಕ್ಷದ ನಾಯಕರು ಬಂದಿರಲಿಲ್ಲ, ವಿರೋಧ ಪಕ್ಷದ ನಾಯಕರು ಬಂದರೆ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡೋದಾಗಿ ಹೇಳಿದ್ದರು,
ಅಕ್ಟೋಬರ್ 4 ರಂದು ಚಿಕ್ಕೋಡಿಗೆ ಸಿಎಂ ಯಡಿಯೂರಪ್ಪ ಬರಲಿದ್ದು, ಇಲ್ಲಿ ಬಂದಾಗ ಅವರಿಗೂ ಕೂಡ ವಿನಂತಿ ಮಾಡಿ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಲು ಕೇಳಿಕೊಳ್ಳಲಾಗುವುದು, ಅಭಿವೃದ್ಧಿ ಆಗಬೇಕಿದ್ದರೆ ಚಿಕ್ಕೋಡಿ ಜಿಲ್ಲೆಯಾಗಲೇಬೇಕು ಎಂದು ಹೇಳಿದರು. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕಾಗವಾಡ ಮತಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಕೇಳಿದಾಗ ನೀವು ಈ ವಿಚಾರವನ್ನು ಪ್ರಕಾಶ ಹುಕ್ಕೇರಿ ಅವರನ್ನು ಕೇಳಿ ಎಂದು ಜಾರಿಕೊಂಡರು.