ಬೆಳಗಾವಿ: ಅಡುಗೆ ಅನಿಲ (ಸಿಲಿಂಡರ್) ಖಾಲಿ ಆದ ಕಾರಣ ಮಧ್ಯಾಹ್ನದ ಊಟವಿಲ್ಲದೇ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವಡರಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಅಡುಗೆ ಅನಿಲ ಖಾಲಿ: ಮಧ್ಯಾಹ್ನದ ಬಿಸಿಯೂಟ ಇಲ್ಲದೆ 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಊಟವಿಲ್ಲದೆ ಮಕ್ಕಳು ಅಸ್ವಸ್ಥ
ಗ್ಯಾಅಡುಗೆ ಅನಿಲ (ಸಿಲಿಂಡರ್) ಖಾಲಿ ಆದ ಕಾರಣ ಮಧ್ಯಾಹ್ನದ ಊಟವಿಲ್ಲದೇ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವಡರಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಗ್ಯಾಸ್ ಇಲ್ಲದ ಕಾರಣ ಶಾಲೆಯ ಬಿಸಿಯೂಟ ತಯಾರಕರು ಅಡುಗೆ ಮಾಡಿಲ್ಲ. ಹಸಿವಿನಿಂದ ಶಾಲೆಯ 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಈ ಶಾಲೆಗೆ ಅಡುಗೆ ಮಾಡಲು ವಿಶ್ವಕರ್ಮ ಮಹಿಳಾ ಸಂಘ ಟೆಂಡರ್ ಪಡೆದಿದೆ. ಈ ಸಂಘ ನಿಯಮಿತವಾಗಿ ಸಿಲಿಂಡರ್ ವಿತರಣೆ ಮಾಡಿಲ್ಲ. ಹೀಗಾಗಿ ತೀವ್ರ ಹಸಿವಿನಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಎಚ್ಚೆತ್ತ ಶಿಕ್ಷಕರು ಆ್ಯಂಬುಲೆನ್ಸ್ ಮೂಲಕ ಮಕ್ಕಳನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ವಿಶ್ವಕರ್ಮ ಮಹಿಳಾ ಸಂಘದ ವಿರುದ್ಧ ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.