ಬೆಳಗಾವಿ: ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿಎಂ ಬಸವರಾಜ್ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಬೆಳಗಾವಿಯ ಎಂಕೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನ ಏಪ್ರಿಲ್, ಮೇ ನಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಬೇಕಿದೆ. ಕಾಂಗ್ರೆಸ್ ನೆರವಿನಿಂದ ಅಧಿಕಾರದ ಮಾಡಿದ ಜೆಡಿಎಸ್ ಪಕ್ಷವನ್ನು ದೂರವಿಡಬೇಕಿದೆ ಎಂದರು.
ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ:ರಾಜ್ಯ ಕಾಂಗ್ರೆಸ್ ದೆಹಲಿಯ ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ. ಜೆಡಿಎಸ್ಗೆ ಹಾಕೋ ಮತ ಕಾಂಗ್ರೆಸ್ ಹಾಕಿದ ಹಾಗೆ, ಅನೇಕ ಭರವಸೆಯನ್ನು ಕಾಂಗ್ರೆಸ್, ಜೆಡಿಎಸ್ ಕೊಡುತ್ತಿದ್ದಾರೆ. ಆದರೆ, ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಕಾಂಗ್ರೆಸ್, ಜೆಡಿಎಸ್ ಬಡವರಿವಾಗಿ ಏನು ಮಾಡಿದೆ ಎಂದು ನಾನೂ ಪ್ರಶ್ನೆ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದರು. ದಲಿತ ಮಗನನ್ನು ರಾಷ್ಟ್ರಪತಿ ಮಾಡಿದ್ವಿ, ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಕಳಸಾ, ಬಂಡೂರಿ ಯೋಜನೆ ನೀಡಲು ಸಿಎಂ ದೊಡ್ಡ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಮಹದಾಯಿ ಯೋಜನೆ ಡಿಪಿಆರ್ ಅನುಮೋದನೆ ನೀಡಿದೆ:ಕರ್ನಾಟಕ ಮಹತ್ವಾಕಾಂಕ್ಷಿ ಯೋಜನೆಯಾದ ಮಹದಾಯಿ ಯೋಜನೆಯನ್ನು ಗೋವಾ ಸರ್ಕಾರ ಜೊತೆ ಮಾತನಾಡಿ ಯೋಜನೆಗೆ ಪ್ರಾರಂಭಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಚಾಲನೆ ನೀಡಲಾಗಿದೆ. ಆದರೆ, ಹಿಂದೆ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಾಗ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುದಿಲ್ಲ ಎಂದು ಹೇಳಿದ್ದರು. ಆದರೆ, ನಮ್ಮ ಸರ್ಕಾರ ಮಹದಾಯಿ ಯೋಜನೆ ಡಿಪಿಆರ್ ಅನುಮೋದನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರಕಾರ ಇರುವುದರಿಂದ ದೇಶದಲ್ಲಿ ಪ್ರಗತಿ ಕಾಣುತ್ತಿದೆ, ದೇಶದ ಉದ್ದಅಗಲಕ್ಕೂ ಅಭಿವೃದ್ಧಿ ನಡೆಯುತ್ತಿದ್ದೆ, ಪ್ರಪಂಚವೇ ಭಾರತ ದೇಶದತ್ತ ನೋಡುತ್ತಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜನಸಾಮಾನ್ಯರಿಗೆ ಅಭಿವೃದ್ಧಿ ನೀಡದೆ ತಮ್ಮ ಪ್ರತಿಷ್ಠೆ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ವಿರುದ್ಧ ಹರಿಹಾಯ್ದರು. ಈ ವೇಳೆ ಸಂಸದ ರಾಹುಲ್ ಗಾಂಧಿ, ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿ ಹೇಳಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ:ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗದ ಯೋಜನೆ ಪ್ರಗತಿಯಲ್ಲಿ ಇದೆ. ಕಿತ್ತೂರು 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಮಾಡುತ್ತೇವೆ. ಏತ ನೀರಾವರಿ ಯೋಜನೆ ಮಾಡುತ್ತೇವೆ, ಬೈಲಹೊಂಗಲದಲ್ಲಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣ ಮಾಡಲಾಗುವುದು, ಭಾರತ ಇಂದು ಜಿ 20 ರ ಅಧ್ಯಕ್ಷತೆ ವಹಿಸುತ್ತಿದೆ ಜಗತ್ತು ಇಂದು ಭಾರತದ ಪ್ರಧಾನಿ ಏನು ಹೇಳುತ್ತಾರೆ ಎಂದು ಗಮನಿಸುತ್ತಿದೆ. 11ನೇ ಸ್ಥಾನದಲ್ಲಿ ದೇಶದ ಆರ್ಥಿಕತೆ ಇತ್ತು, ಇಂದು 5ನೇ ಸ್ಥಾನದಲ್ಲಿ ಇದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಬೇಕು ಜಿಲ್ಲೆಯಲ್ಲಿ 16ಸ್ಥಾನ ಗೆಲ್ಲಿಸಬೇಕು ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟು ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ ಎಂದು ಜನರಲ್ಲಿ ವಿನಂತಿಸಿದರು.
ಗೃಹ ಸಚಿವ ಅಮಿತ್ ಶಾ ಅವರು ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿದ್ದಾರೆ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅವತ್ತು ಕಣ್ಣಿಗೆ ಕಾಣುವ ಬ್ರೀಟಿಷ ಶತ್ರುಗಳು ಇದ್ದರು. ಆದರೆ. ಇವತ್ತು ಪಿಐಎಪ್ಐ ನಂತ ಹಲವು ಉಗ್ರ ಸಂಘಟನೆ ತಲೆ ಎತ್ತುವ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿದ್ದಾರೆ. ದೇಶದಲ್ಲಿ ಉಗ್ರ ಸಂಘಟನೆ ಹುಟ್ಟಡಗಿಸಿದ್ದಾರೆ. ದೇಶ ಸುಭದ್ರವಾಗಿ ಇದ್ದರೆ ಮಾತ್ರ ದೇಶ ಉಜ್ವಲತೆ ಕಾಣಲು ಸಾಧ್ಯ, ಸದೃಢವಾದ ವ್ಯವಸ್ಥೆ ಬರಬೇಕಾದರೆ, ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂದರು.
ಕಾಂಗ್ರೆಸ್ ನವರಿಗೆ ಈಗ ಜನರು ನೆನಪಿಗೆ ಬಂದಿದಾರೆ, ಪ್ರಜಾ ಧ್ವನಿ ಎಂಬ ಕಾರ್ಯಕ್ರಮ ಮಾಡುತ್ತಿದ್ದಾರೆ ಇಷ್ಟು ದಿನಾ ನೀವು ಎಲ್ಲಿ ಹೋಗಿದ್ದಿರಿ?. ಎಸ್ಸಿ, ಎಸ್ಟಿ, ಜನಾಂಗದ ನಾವೇ ಉದ್ದಾರ ಮಾಡುವುದು ಎಂದು ಹೇಳುತಿದ್ದರಿ ಆದರೆ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ರೂಪಿಸಿ, ಅವರಿಗೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರೈತರಿಗೆ ಸಂಕಷ್ಟ ಎದುರಾಗಿತ್ತು, ಆದರೆ ನಮ್ಮ ಸರ್ಕಾರ ಬಂದಾಗ ರೈತರಿಗೆ ನೇರವಾಗಿ ಖಾತೆಗೆ ಹಣ ಸಂದಾಯ ಆಗುತ್ತೇ, ನೇರೆ ಸಂತ್ರಸ್ತರಿಗೆ ಮನೆ, ಬೆಳೆ ಕಳೆದುಕೊಂಡ ರೈತರಿಗೆ ಹಣವನ್ನು ಸಂದಾಯ ಮಾಡಲಾಗಿದೆ, ಹಾಗೂ ಸರಕಾರದಿಂದ ಹಲವು ಜನಪರ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.