ಚಿಕ್ಕೋಡಿ :ಮೊಹರಂ ಹಬ್ಬವನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಕೆಲವು ಗ್ರಾಮದಲ್ಲಿ ಭಕ್ತಾದಿಗಳು ಕೆಂಡದ ಓಕುಳಿ ಆಡುವ ಮೂಲಕ ಮೊಹರಂ ಆಚರಣೆ ಮಾಡುತ್ತಾರೆ. ಕೆಲವರು ಬಾರುಗೋಲಿನಿಂದ ಬಡಿದುಕೊಂಡು ಭಕ್ತಿಯನ್ನು ಸಮರ್ಪಣೆ ಮಾಡುವ ದೃಶ್ಯ ಜಿಲ್ಲೆಯಲ್ಲಿ ಕಂಡುಬಂದಿದೆ.
ನೆರೆಯಲ್ಲೂ ಭಾವೈಕ್ಯತೆ ಮೆರೆದು ಮೊಹರಂ ಹಬ್ಬ ಆಚರಿಸಿದ ಹಿಂದೂ-ಮುಸ್ಲಿಂ ಭಕ್ತರು
ಮೊಹರಂ ಹಬ್ಬವನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಒಂದೊಂದು ಗ್ರಾಮದಲ್ಲಿ ಭಕ್ತಾದಿಗಳು ಕೆಂಡದ ಓಕುಳಿ ಆಡುವ ಮೂಲಕ ಮೊಹರಂ ಆಚರಣೆ ಮಾಡುತ್ತಾರೆ. ಕೆಲವರು ಬಾರುಕೋಲು ಮೂಲಕ ಬಡಿದುಕೊಂಡು ಭಕ್ತಿಯನ್ನು ಸಮರ್ಪಣೆ ಮಾಡುವ ದೃಶ್ಯ ಚಿಕ್ಕೋಡಿಯಲ್ಲಿ ಕಂಡುಬಂದಿದೆ.
ಇನ್ನು ಕೆಲವರು ಕೆಂಡದ ಮೇಲೆ ನಡೆದುಕೊಂಡು ಲಾಲಸಾಬನಿಗೆ ಭಕ್ತಿಯಿಂದ ತಮ್ಮಇಷ್ಟಾರ್ಥಗಳು ಈಡೇರಿಸುವಂತೆ ಹಿಂದೂ ಭಕ್ತರು ಬೇಡಿಕೊಳ್ಳುವುದು ಈ ಮೊಹರಂ ಹಬ್ಬ ವಿಶೇಷ.
ಲಾಲಸಾಬನಿಗೆ ಸಾಯಂಕಾಲದಿಂದ ರಾತ್ರಿಯ ತನಕ ನೈವೇದ್ಯ ಮಾಡಲಾಗುತ್ತದೆ, ರಾತ್ರಿ 10 ಗಂಟೆಯ ಸುಮಾರಿಗೆ ರೋಜಾ ಮಾಡಿದ ಹಿಂದೂ ಭಕ್ತಾದಿಗಳು ಕೆಂಡದಲ್ಲಿ ತಯಾರಿಸಿದ ಬೆಂಕಿಯನ್ನ ಸುತ್ತು ಹಾಕಿ ಲಾಲಸಾಬ ಕೀ ದೋಸ್ತ್ರೋ ದಿನ್, ಭೋಲಾರಯಮೋ ಧೂಲಾ ಎಂದು ಜೈಕಾರ ಹಾಕುತ್ತಾ ಮೈ ಮೇಲೆ ಕೆಂಡ ಎರಚಿಕೊಳ್ಳುತ್ತಾರೆ. ನಂತರ ಈ ಬೆಂಕಿ ಎರಚಿಕೊಳ್ಳುವ ಕಾರ್ಯಕ್ರಮ ಮುಗಿದ ನಂತರ ರೋಜಾ ಮುಕ್ತಾಯವಾಗಿ ಮುಂಜಾನೆಯಿಂದ ರಾತ್ರಿಯವರೆಗೂ ಇದ್ದ ಉಪವಾಸ (ರೋಜಾ) ಮುಕ್ತಾಯವಾಗುತ್ತದೆ.