ಚಿಕ್ಕೋಡಿ: ಕೊರೊನಾ ನಂತರ ಶಾಲಾ - ಕಾಲೇಜುಗಳನ್ನು ಆರಂಭಿಸಲಾಗಿದ್ದು, ಮೂಲ ಸೌಕರ್ಯಗಳನ್ನು ನೀಡದೆ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನಿಭವಿಸುವಂತ ಪ್ರಸಂಗ ಎದುರಾಗಿದೆ.
ಶಾಲೆಗಳು ಆರಂಭವಾದ್ರೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ: ಶಾಲೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ
ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾದರೂ ಸಹ ಮಕ್ಕಳಿಗೆ ಸೈಕಲ್ ಭಾಗ್ಯ ಇಲ್ಲದಂತಾಗಿದೆ.ಇದರಿಂದ ಶಾಲೆಗೆ ತೆರಳಲು ಮಕ್ಕಳು ಹರಸಾಹಸ ಪಡುವಂತಾಗಿದೆ.
ಸರ್ಕಾರಿ ಶಾಲೆ ಕಡೆಗೆ ಮುಖಮಾಡಲಿ ಎನ್ನುವ ಉದ್ದೇಶದಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಗುತ್ತದೆ. ಆದರೆ, ಮಕ್ಕಳಿಗೆ ಸೈಕಲ್ ದೊರಯದೇ ಇರುವುದರಿಂದ ತೋಟದ ವಸತಿಯಲ್ಲಿರುವ ಮಕ್ಕಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಂಡು ನಮಗೆ ಸರ್ಕಾರ ಸೈಕಲ್ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.
ದಿನಂಪ್ರತಿ ನಾಲ್ಕೈದು ಕಿ.ಮೀ ಬ್ಯಾಗ್, ನೀರು, ಊಟ ತೆಗೆದುಕೊಂಡು ಬಂದು ಶಾಲೆಗಳಿಗೆ ಹಾಜರಾಗಬೇಕಿದೆ. ದೂರದ ತೋಟದ ವಸತಿಯಿಂದ ನಡೆದುಕೊಂಡು ಬರಲು ಸಾಕಷ್ಟು ಸಮಯ ಬೇಕು. ಬೇಸಿಗೆ ಕಾಲ ಪ್ರಾರಂಭವಾಗಿದ್ದು ಸುಡುವ ಬಿಸಲಿನಲ್ಲಿ ಮನೆಗಳಿಗೆ ತೆರಳಬೇಕಾದರೆ ತುಂಬಾ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.