ಕರ್ನಾಟಕ

karnataka

ETV Bharat / state

ಸರ್ಕಾರದ ನಿರ್ಲಕ್ಷ್ಯ: ಸಂತ್ರಸ್ತರ ಸಂಕಷ್ಟ ಹೇಳೋರಿಲ್ಲ..ಕೇಳೋರಿಲ್ಲ - DCM Lakshmana Savadi

ಸರ್ಕಾರದ ನಿರ್ಲಕ್ಷ್ಯದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಸಂತ್ರಸ್ತರು ಪ್ಲಾಸ್ಟಿಕ್​ ಶೆಡ್​ನಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜಕಾರಣಿಗಳು ಕೊಟ್ಟ ಮಾತು ತಪ್ಪಿದ್ದಾರೆ ಎಂದು ಸಂತ್ರಸ್ತರು ಬೀದಿಗಿಳಿದು  ಪ್ರತಿಭಟನೆ ಮಾಡುತ್ತಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ: ಸಂತ್ರಸ್ತರ ಸಂಕಷ್ಟ ಹೇಳೋರಿಲ್ಲ..ಕೇಳೋರಿಲ್ಲ

By

Published : Sep 9, 2019, 10:05 PM IST

ಚಿಕ್ಕೋಡಿ:ಸರ್ಕಾರದ ನಿರ್ಲಕ್ಷ್ಯದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಸಂತ್ರಸ್ತರು ಪ್ಲಾಸ್ಟಿಕ್​ ಶೆಡ್​ನಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜಕಾರಣಿಗಳು ಕೊಟ್ಟ ಮಾತು ತಪ್ಪಿದ್ದಾರೆ ಎಂದು ಸಂತ್ರಸ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ: ಸಂತ್ರಸ್ತರ ಸಂಕಷ್ಟ ಹೇಳೋರಿಲ್ಲ..ಕೇಳೋರಿಲ್ಲ

ಕಳೆದ ಆಗಸ್ಟ್ ತಿಂಗಳಲ್ಲಿ 15-20 ದಿನಗಳ ಕಾಲ ಸಂಪೂರ್ಣ ಮಾಂಜರಿ ಗ್ರಾಮ ಮುಳುಗಡೆಯಾಗಿತ್ತು. ಇದರಿಂದ ಸುಮಾರು 500ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ಮನೆ ಕಳೆದುಕೊಂಡ ಜನರು ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ಒಂದು ವಾರದೊಳಗೆ ಶೆಡ್​ ನಿರ್ಮಾಣ ಮಾಡೋದಾಗಿ ಡಿಸಿಎಂ ಲಕ್ಷ್ಮಣ ಸವದಿ ಆಗಸ್ಟ್ 31ರಂದು ಅಥಣಿಯಲ್ಲಿ ಹೇಳಿದ್ದರು. ಆದರೆ, ತಾತ್ಕಾಲಿಕ ಶೆಡ್ ನಿರ್ಮಿಸುವ ಯೋಜನೆ ಹುಸಿಯಾಗಿದೆ.

ಸಚಿವ ಕೆ.ಎಸ್​.ಈಶ್ವರಪ್ಪ ಕೂಡ ಮಾಂಜರಿ ಗ್ರಾಮಕ್ಕೆ ಭೇಟಿ ನೀಡಿ, 2 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಇನ್ನೂ, ಸಮಸ್ಯೆ ಬಗೆಹರಿಸದ ವಿರುದ್ಧ ನೆರೆ ಸಂತ್ರಸ್ತರು ಪ್ರತಿಭಟಸಿ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಶೆಡ್​ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details