ಬೆಳಗಾವಿ:ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಥಣಿ ಹೃದಯ ಭಾಗ ಎಪಿಎಂಸಿ ಗೇಟ್ನಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು ಇನ್ನೂ ರಾರಾಜಿಸುತ್ತಿದೆ.
ನವೆಂಬರ್ 11ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಎಪಿಎಂಸಿ ಗೇಟ್ ಬಳಿಯಿರುವ ಕರ್ನಾಟಕ ಸರ್ಕಾರದ 'ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದ ಸರ್ಕಾರ' ಎಂಬ ಜಾಹೀರಾತನ್ನ ಇನ್ನೂ ತೆರವು ಮಾಡಿಲ್ಲ.
ನೀತಿ ಸಂಹಿತೆ ಜಾರಿಯಲ್ಲಿದ್ರೂ ಸರ್ಕಾರಿ ಜಾಹೀರಾತಿಗಿಲ್ಲ ಕಡಿವಾಣ.. ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಉಪಚುನಾವಣೆ ಹಿನ್ನೆಲೆ ನವೆಂಬರ್ 11ರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಸರ್ಕಾರಿ ಜಾಹೀರಾತು ಹಾಗೂ ಸಾರ್ವಜನಿಕವಾಗಿ ಗೋಚರಿಸುವ ರಾಜಕಾರಣಿಗಳ ಹೆಸರು ತೆರವು ಮಾಡಬೇಕಾಗಿದ್ದ ತಾಲೂಕು ಆಡಳಿತ, ಅಥಣಿ ಹೃದಯ ಭಾಗದ ಎಪಿಎಂಸಿಯಲ್ಲಿ ಅತಿ ದೊಡ್ಡದಾದ ಫ್ಲೆಕ್ಸ್ ಇನ್ನೂ ರಾರಾಜಿಸುತ್ತಿದ್ದರೂ ತೆರವುಗೊಳಿಸಿಲ್ಲ. ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡರು ಎಲ್ಲೋ ಒಂದು ಕಡೆ ಅಥಣಿ ವಿಧಾನಸಭಾ ಕ್ಷೇತ್ರ ಅವ್ಯವಸ್ಥೆಯಿಂದ ಕೂಡಿದಂತಾಗಿದೆ.
ಇನ್ನು, ಚೆಕ್ ಪೋಸ್ಟ್‌ಗಳಲ್ಲಿ ಸರಿಯಾದ ರೀತಿ ಬ್ಯಾರಿಕೇಡ್‌ಗಳೂ ಇಲ್ಲ. ವಾಹನ ತಪಾಸಣೆ ಕೂಡ ಕೆಲ ಕಡೆ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಚುನಾವಣೆ ಆಯೋಗ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.