ಬೆಳಗಾವಿ : ಗೋಕಾಕ್‌ನಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿಯಾಗಿದೆ. ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ನೀರು ನಿಂತಿದ್ದು ಹಲವು ಗೋಷ್ಠಿಗಳನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಯಿತು.
ಕನ್ನಡ ಜಾತ್ರೆಗೆ ವರುಣನ ಅಡ್ಡಿ.. ಗೋಕಾಕ್‌ನಲ್ಲಿ ಮಳೆ ಸುರಿದ್ರೂ ಕಮ್ಮಿಯಾಗದ ಜನರ ಉತ್ಸಾಹ - Kannada news
ಕೆಎಲ್ಇ ಎಂಬಿ ಮನವಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಮಳಿಗೆಗಳನ್ನು ತೆರೆಯಲಾಗಿದೆ. ಮಳೆ ಅಡ್ಡಿಯಾದ ಪರಿಣಾಮ ವ್ಯಾಪಾರಸ್ಥರು ಪರದಾಡಬೇಕಾದ ಪ್ರಸಂಗ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿ
ನಗರದ ಕೆಎಲ್ಇ ಎಂ ಬಿ ಮನವಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಮಳಿಗೆಗಳನ್ನು ತೆರೆಯಲಾಗಿದೆ. ಮಳೆ ಅಡ್ಡಿಯಾದ ಪರಿಣಾಮ ವ್ಯಾಪಾರಸ್ಥರು ಪರದಾಡಬೇಕಾದ ಪ್ರಸಂಗ ನಡೆಯಿತು.
ಮಳೆಯ ಪರಿಣಾಮ ವೇದಿಕೆಯಲ್ಲಿ ನೀರು ನಿಂತಿದ್ದು ಜನರು ಕುಳಿತುಕೊಳ್ಳಲು ತೊಂದರೆಯಾಗಿತ್ತು, ಇದರಿಂದ ಮಧ್ಯಾಹ್ನದ ನಂತರದ ಗೋಷ್ಠಿಗಳನ್ನು ಒಳ ಸಭಾಂಗಣದಲ್ಲಿ ನಡೆಸಲಾಯಿತು. ಕನ್ನಡ ಜಾತ್ರೆಗೆ ಮಳೆ ಅಡ್ಡಿಯಾದರೂ ಜನರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ.