ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಎರಡಲ್ಲ ನಾಲ್ಕು ಗುಂಪುಗಳಿವೆ: ಸತೀಶ್​ ಜಾರಕಿಹೊಳಿ‌ ‌ಅಚ್ಚರಿ‌ ಹೇಳಿಕೆ - ಸತೀಶ್ ಜಾರಕಿಹೊಳಿ ಲೇಟೆಸ್ಟ್ ನ್ಯೂಸ್

ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕಂಗ್ರೆಸ್​ನಲ್ಲಿ ನಾಲ್ಕು ಗುಂಪುಗಳಿದ್ದು, ನೂತನ ಅಧ್ಯಕ್ಷರು ನೇಮಕ ಆಗುವವರೆಗೆ ಹೋರಾಟ ಇರುತ್ತದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Karnataka Congress chief post,ಕರ್ನಾಟಕ ಕಾಂಗ್ರೆಸ್​ನಲ್ಲಿ ನಾಲ್ಕು ಗುಂಪು
ಸತೀಶ್​ ಜಾರಕಿಹೊಳಿ‌

By

Published : Jan 13, 2020, 5:00 PM IST

ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ‌ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್​​ನಲ್ಲಿ ಎರಡಲ್ಲ, ನಾಲ್ಕು ಗುಂಪುಗಳಿವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸತೀಶ್​ ಜಾರಕಿಹೊಳಿ‌, ಮಾಜಿ ಸಚಿವ

ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ಆಗುವವರೆಗೆ ಹೋರಾಟ ಇರುತ್ತದೆ. ನಮ್ಮ ಗುಂಪಿಗೆ ಅಧ್ಯಕ್ಷ ಸ್ಥಾನ ಸಿಗಲಿ ಎಂದು ಎಲ್ಲರೂ ಪ್ರಯತ್ನ ಮಾಡುತ್ತಾರೆ. ಅಧ್ಯಕ್ಷರು ನೇಮಕವಾದ ಬಳಿಕ ಎಲ್ಲರೂ ಒಂದೇ. ಯಾರೇ ಕೆಪಿಸಿಸಿ ಅಧ್ಯಕ್ಷರಾದರೂ ಅವರ ಜೊತೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಅಂತಿಮ ಆಗುವ ಸಾಧ್ಯತೆ ಇದೆ. ಹೀಗಾಗಿ ನಾನೇನು ದೆಹಲಿಗೆ ಹೊರಟ್ಟಿಲ್ಲ. ಪ್ರಾದೇಶಿಕವಾರು ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಮಾಡುವ ಚಿಂತನೆ ಪಕ್ಷದ ಮುಂದಿದೆ ಎಂದರು.

ಬಳ್ಳಾರಿಯಲ್ಲಿ ಶಾಸಕ ಜಮೀರ ಅಹ್ಮದ್ ಪ್ರತಿಭಟನೆ ನಡೆಸುತ್ತಿರುವುದು ಸರಿ ಎಂದು ಜಮೀರ್ ಪ್ರತಿಭಟನೆಯನ್ನು ಸತೀಶ್ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಆರ್​ಎಸ್ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಕನಕಪುರ ಚಲೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದತ್ತ ಪೀಠ, ಅಯೋಧ್ಯ ಜತೆಗೆ ಇದೀಗ ಕನಕಪುರ ಹೊಸ ಸೇರ್ಪಡೆಯಾಗಿದೆ. ಅವಕಾಶ ಸಿಕ್ಕ ಕಡೆಯಲ್ಲ ಬಿಜೆಪಿ ಹಾಗೂ ಆರ್​ಎಸ್ಎಸ್ ಕೋಮು ಉದ್ದೇಶಕ್ಕೆ ಬಳಕೆ ಮಾಡುತ್ತಾರೆ. ಸಿಎಎ, ಎನ್ಆರ್​ಸಿ ಕಾನೂನು ತರುವ ಮೂಲಕ ದೇಶವನ್ನ ಇಬ್ಭಾಗ ಮಾಡಲು ಯತ್ನಿಸಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details