ಕರ್ನಾಟಕ

karnataka

By

Published : Dec 3, 2021, 7:53 AM IST

ETV Bharat / state

'ಕನಿಷ್ಠ ಪಕ್ಷ ಗ್ರಾ.ಪಂಚಾಯಿತಿಗೆ ಏನು ಬೇಕು, ಬೇಡ ಎಂಬ ಅರಿವೇ ಇಲ್ಲದವರು ಪರಿಷತ್‌ಗೆ ಆಯ್ಕೆಯಾಗ್ತಿದ್ದಾರೆ'

ಕಾಗವಾಡದಲ್ಲಿ ಬಿಜೆಪಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್‌ಗೆ ಆಯ್ಕೆಯಾಗುತ್ತಿರುವ ಸದಸ್ಯರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

dcm-lakshmana-savadi
ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಚಿಕ್ಕೋಡಿ:ಪ್ರಜ್ಞಾವಂತ ಬುದ್ಧಿಜೀವಿಗಳು, ಕಾನೂನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ವ್ಯಕ್ತಿಗಳು ಇರಬೇಕಾದ ವಿಧಾನ ಪರಿಷತ್​ನಲ್ಲಿ ಎಂಎಲ್ಎ, ಎಂಎಲ್​ಸಿ ಪದದ ಅರ್ಥವೇ ಗೊತ್ತಿಲ್ಲದವರು ಆಯ್ಕೆ ಆಗುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.


ಈಗ ತಮ್ಮ ತಮ್ಮ ಉದ್ಯೋಗದಲ್ಲಿ ಮಗ್ನರಾಗಿದ್ದವರನ್ನು ಪರಿಷತ್‌ಗೆ ಆಯ್ಕೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಂದ ಮತ ಪಡೆದ ಈ ವ್ಯಕ್ತಿಗಳಿಗೆ ಕನಿಷ್ಠ ಪಕ್ಷ ಗ್ರಾಮ ಪಂಚಾಯಿತಿಗೆ ಏನು ಬೇಕು, ಏನು ಬೇಡ‌ ಎಂಬ ಪರಿಕಲ್ಪನೆಯೂ ಇಲ್ಲ ಎಂದರು.

ಹೀಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಕಡೆ ಹೊರಟಿದೆ ಅನ್ನೋದನ್ನು ಕೆಳಹಂತದಲ್ಲಿರುವ ನೀವುಗಳು ಆಲೋಚನೆ ಮಾಡಬೇಕು. ಇಲ್ಲವಾದರೆ, ಮುಂದಿನ ದಿನಗಳ ಏನಾದೀತು ಅನ್ನೋದನ್ನು ನೀವೇ ಊಹೆ ಮಾಡಿಕೊಳ್ಳಬೇಕು‌ ಎಂದು ಗ್ರಾಮ ಪಂಚಾಯತಿ ಸದಸ್ಯರಿಗೆ ನೀತಿ ಪಾಠ ಹೇಳುವ ಮೂಲಕ ಭರ್ಜರಿ ಪ್ರಚಾರ ನಡೆಸಿದರು.

ಇದನ್ನೂ ಓದಿ:ಬೆಳಗಾವಿ ಅಧಿವೇಶನ ಮೇಲೆ ಒಮಿಕ್ರೋನ್ ಕರಿಛಾಯೆ: ಸಚಿವಾಲಯ ಸಿಬ್ಬಂದಿಯಲ್ಲಿ ಹೆಚ್ಚಿದ ಆತಂಕ

ABOUT THE AUTHOR

...view details