ಕರ್ನಾಟಕ

karnataka

ETV Bharat / state

ತಲೆಯಮೇಲೆ ಒಂದು ಸೂರು ಆದ್ರೆ ಸಾಕು: ಬೆಳಗಾವಿ ಪ್ರವಾಹ ಸಂತ್ರಸ್ತರ ಅಳಲು - ತಲೆಯಮೇಲೆ ಒಂದು ಸೂರು ಆದರೆ ಸಾಕು

ಕಳೆದು 18 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಭಾಗಶಃ ಮುಳುಗಿ ಹೋಗಿದೆ. ಅನೇಕ ಮನೆಗಳಿಗೆ ಹಾನಿಗಳಾಗಿದ್ದು, ಅಂದಾಜಿಸಲಾಗದಷ್ಟು ನಷ್ಟ ಸಂಭವಿಸಿದೆ.

ಮಳೆಯಿಂದ ಸಂಚಾರ ಅಸಾಧ್ಯವಾಗಿದೆ.

By

Published : Aug 15, 2019, 12:09 PM IST

ಬೆಳಗಾವಿ:ಕಳೆದು 18 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಭಾಗಶಃ ಮುಳುಗಿ ಹೋಗಿದೆ. ಅನೇಕ ಮನೆಗಳಿಗೆ ಹಾನಿಗಳಾಗಿದ್ದು ಅಂದಾಜು ಮಾಡಲಾಗದಷ್ಟು ನಷ್ಟ ಸಂಭವಿಸಿದೆ. ಈ ಮಧ್ಯೆ ಮನೆ ಕಳೆದುಕೊಂಡು ಸಾಂತ್ವನ ಕೇಂದ್ರದಲ್ಲಿ ಉಳಿದಿಕೊಂಡಿರುವ ಜನರ ಮುಂದಿರುವ ಏಕೈಕ ಪ್ರಶ್ನೆ ತಮಗೆ ಮುಂದಿನ ದಾರಿ ಯಾವುದಯ್ಯ ಎಂದು ಚಿಂತೆಗೀಡಾಗಿದ್ದಾರೆ.

ಮಳೆ ಸಂತ್ರಸ್ತರ ಅಳಲು

ನಗರದ ಅನೇಕ ಮನೆಗಳಲ್ಲಿ ನೀರು ನುಗ್ಗಿ, ಸುಮಾರು ಮುನ್ನೂರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಇನ್ನು ಜಿಲ್ಲೆಯ ವಿವಿಧ ಹಳ್ಳಿಗಳ ಪರಿಸ್ಥಿತಿ ಹೇಳತೀರದು. ಅನೇಕ ಗ್ರಾಮಗಳಲ್ಲಿ ಇನ್ನೂ ನೀರು ನಿಂತಿದ್ದು ಸಾವಿರಾರು ಮನೆಗಳು ನೆಲಕ್ಕುರುಳಿವೆ. ಈ ಸಮಯದಲ್ಲಿ ಸರ್ಕಾರ ನಮಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಜನರು ಸರ್ಕಾರದ ಪರಿಹಾರವನ್ನು ಎದುರು ನೋಡುತ್ತಿದ್ದಾರೆ.

ABOUT THE AUTHOR

...view details