ಕರ್ನಾಟಕ

karnataka

ETV Bharat / state

ಕಳ್ಳ ಮಾರ್ಗದಿಂದ ರಾಜ್ಯ ಪ್ರವೇಶಿಸಿದರೆ ಎಫ್‌ಐಆರ್: ಅಥಣಿ ಡಿವೈಎಸ್‍ಪಿ ಎಸ್. ವಿ. ಗಿರೀಶ - ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ

ಕಳ್ಳ ಮಾರ್ಗದಿಂದ ರಾಜ್ಯಕ್ಕೆ ಪ್ರವೆಶಿಸುತ್ತಿರುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಯಾರಾದರು ಬಂದದ್ದು ಕಂಡು ಬಂದರೆ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಥಣಿ ಡಿವೈಎಸ್‍ಪಿ ಎಸ್. ವಿ. ಗಿರೀಶ ಹೇಳಿದ್ದಾರೆ.

checkpost
checkpost

By

Published : May 20, 2020, 8:03 AM IST

ಚಿಕ್ಕೋಡಿ (ಬೆಳಗಾವಿ): ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಕಾಗವಾಡ ಚೆಕ್ ಪೊಸ್ಟ್ ತಪ್ಪಿಸಿ ಕಳ್ಳ ಮಾರ್ಗದಿಂದ ರಾಜ್ಯವನ್ನು ಪ್ರವೇಶಿಸಿದರೆ ಅಂತವರ ವಿರುದ್ದ ಎಫ್‌ಐಆರ್ ದಾಖಲಿಸಲಾಗುದು ಎಂದು ಅಥಣಿ ಡಿವೈಎಸ್‍ಪಿ ಎಸ್. ವಿ. ಗಿರೀಶ ಹೇಳಿದರು.

ಬೆಳಗಾವಿ‌ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಿರ್ಮಿಸಿದ ಚೆಕ್ ಪೊಸ್ಟ್​ಗೆ ಭೇಟಿ ನೀಡಿದ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಕಾಗವಾಡ ಪಟ್ಟಣದಲ್ಲಿ ಅನ್ಯ ಮಾರ್ಗದಿಂದ ಜನರು ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ದೇಶದಲ್ಲೇ ಹೆಚ್ಚು ಸೋಂಕಿತನ್ನು ಹೊಂದಿದೆ ಎಂದರು.

ಲಾಕ್‍ ಡೌನ್ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿರುವುದರಿಂದ ನೆರೆಯ ಮಹಾರಾಷ್ಟ್ರದ ಮುಂಬೈ, ಪುಣೆ, ಕರಾಡ, ಸಾಂಗಲಿ ಮತ್ತಿತತರ ಕಡೆಗಳಿಂದ ಬಂದು ಕಾಗವಾಡದ ಚೆಕ್ ಪೋಸ್ಟ್ ತಪ್ಪಿಸಿ ಕಳ್ಳ ಮಾರ್ಗದಿಂದ ಬರುತ್ತಿರುವವರ ಮೇಲೆ ಪೊಲೀಸ್ ಇಲಾಖೆ ದಿನದ 24 ಗಂಟೆ ಹದ್ದಿನ ಕಣ್ಣು ಇಟ್ಟಿದೆ. ಯಾರಾದರೂ ಕಣ್ಣು ತಪ್ಪಿಸಿ ಬಂದದ್ದು ಕಂಡು ಬಂದರೆ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.

ಮಹಾರಾಷ್ಟ್ರ, ಗುಜರಾತ್, ಕೇರಳ ಹಾಗೂ ತಮಿಳುನಾಡು ಈ ನಾಲ್ಕು ರಾಜ್ಯದ ಜನರು ಕರ್ನಾಟಕಕ್ಕೆ ಬರಲು ನಿಷೇಧವಿದೆ. ಅಂಥವರಿಗೆ ನಾವು ಕರ್ನಾಕಟದ ಗಡಿಯಲ್ಲಿ ಪ್ರವೇಶ ನಿಷೇಧಿಸಿದ್ದೇವೆ ಎಂದು ಹೇಳಿದರು.

ABOUT THE AUTHOR

...view details