ಕರ್ನಾಟಕ

karnataka

ETV Bharat / state

ಮಳೆಗಾಲದಲ್ಲಿ ಸಿಕ್ಕಾಪಟ್ಟೆ ನೆರೆ.. ಚಿಕ್ಕೋಡಿಯಲ್ಲಿ ಬೇಸಿಗೆ ಬಂದ್ರೇ ಜನರಿಗೆ ಬರೆ!

ಸಾಂಗಲಿ ಜಿಲ್ಲೆಯಲ್ಲಿ ಸುರಿಯುವ ಧಾರಾಕಾರ ಮಳೆಗೆ ಮಹಾರಾಷ್ಟ್ರದ ಕೊಯ್ನಾ, ರಾಜಾಪುರ, ಮಹಾಬಲೇಶ್ವರ, ವಾರಾಣಾ, ರಾಧಾನಗರ, ಕಾಳಮ್ಮವಾಡಿ ಜಲಾಶಯಗಳಲ್ಲಿ ನೀರು ಭರ್ತಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ಹಾಗೂ ಚಕೋತ್ರಾ ನದಿಗಳಿಗೆ ಹೆಚ್ಚಿಗೆ ನೀರು ಬಿಡುವುದರಿಂದ ತಾಲೂಕಿನಲ್ಲಿ ನೆರೆ ಸಮಸ್ಯೆ ಸೃಷ್ಟಿಯಾಗಿ ಜನರ ಬದುಕು ದುಸ್ತರವಾಗುತ್ತದೆ.

ಮಳೆ ಬಂದ್ರೆ ಸಾಕು ಶುರುವಾಗುತ್ತೆ ನಡುಕ

By

Published : Jul 29, 2019, 2:00 PM IST

ಚಿಕ್ಕೋಡಿ: ಪ್ರತಿ ವರ್ಷ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಚಿಕ್ಕೋಡಿ ತಾಲೂಕಿನ ನದಿ ತೀರದ ಜನರಿಗೆ ಆತಂಕ ಶುರುವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ತಾಲೂಕಿನ ಐದಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾದ್ರೆ, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಬವಣೆ ತಪ್ಪಿದ್ದಲ್ಲ.

ಈ ಸಮಸ್ಯೆಗಳಿಗೆ ದಶಕಗಳು ಕಳೆದರೂ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಕೃಷ್ಣಾ, ವೇದಗಂಗಾ, ದೂಧಗಂಗಾ, ಪಂಚಗಂಗಾ, ಚಕೋತ್ರಾ ಸೇರಿದಂತೆ ಚಿಕ್ಕೋಡಿ ತಾಲೂಕು ಪಂಚನದಿಗಳ ಬೀಡು. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುವ ಧಾರಾಕಾರ ಮಳೆಗೆ ನದಿಗಳ ಹರಿವಿನಲ್ಲಿ ಏರಿಕೆಯಾಗಿ ತಾಲೂಕಿನ ಕೆಳ ಹಂತದ ಎಂಟು ಸೇತುವೆಗಳು ಸಂಪೂರ್ಣ ಜಲಾವೃತಗೊಳ್ಳುತ್ತವೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಸಾತಾರಾ, ಕೊಲ್ಲಾಪುರ, ಸಾಂಗಲಿ ಜಿಲ್ಲೆಗಳಲ್ಲಿ ಸುರಿಯುವ ಧಾರಾಕಾರ ಮಳೆಗೆ ಮಹಾರಾಷ್ಟ್ರದ ಕೊಯ್ನಾ, ರಾಜಾಪುರ, ಮಹಾಬಲೇಶ್ವರ, ವಾರಾಣಾ, ರಾಧಾನಗರ, ಕಾಳಮ್ಮವಾಡಿ ಜಲಾಶಯಗಳಲ್ಲಿ ನೀರು ಭರ್ತಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ಹಾಗೂ ಚಕೋತ್ರಾ ನದಿಗಳಿಗೆ ಹೆಚ್ಚಿಗೆ ನೀರು ಬಿಡುವುದರಿಂದ ತಾಲೂಕಿನಲ್ಲಿ ನೆರೆ ಸಮಸ್ಯೆ ಸೃಷ್ಟಿಯಾಗಿ ಜನರ ಬದುಕು ದುಸ್ತರವಾಗುತ್ತದೆ.

ಸಂಚಾರ ಸಮಸ್ಯೆ :

ಮಳೆ ಬಂದ್ರೇ ಸಾಕು ಶುರುವಾಗುತ್ತೆ ಆತಂಕ..
ಗ್ರಾಮಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ಶಿದ್ನಾಳ-ಅಕ್ಕೋಳ, ಬೋಜ-ಹುನ್ನರಗಿ, ಕಾರದಗಾ-ಭೋಜ, ಜತ್ರಾಟ-ಭೀವಶಿ, ಕಲ್ಲೋಳ-ಯಡೂರ, ಬೋಜವಾಡಿ ಕುನ್ನೂರ, ಮಲಿಕವಾಡ-ದತ್ತವಾಡ, ಕಾಗವಾಡ ತಾಲೂಕಿನ ಉಗಾರ-ಕುಡಚಿ ಹಾಗೂ ಕೆಳಹಂತದ ಸಂಪರ್ಕ ಸೇತುವೆಗಳು ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದು, ಜನ ಸುಗಮ ಸಂಚಾರಕ್ಕೆ ಪರದಾಡುವಂತಾಗುತ್ತಿದೆ.

ಅಪಾರ ಬೆಳೆ ಹಾನಿ :
ಕೃಷ್ಣಾ ನದಿ ಕಲ್ಲೋಳ, ಯಡೂರ, ಯಡೂರವಾಡಿ, ಚಂದೂರ, ಮಾಂಜರಿ, ಅಂಕಲಿ ಹಾಗೂ ಇಂಗಳಿ ಮೂಲಕ ಹಾಯ್ದು ಹೋಗುತ್ತಿದ್ದು, ಕಾಗವಾಡ, ಅಥಣಿ, ರಾಯಭಾಗ ತಾಲೂಕಿನ ನದಿ ತೀರದ ಗ್ರಾಮಗಳ ಬೆಳೆಗಳು ನೆರೆಗೆ ನದಿತೀರದ ಕಬ್ಬು, ಸೋಯಾಬಿನ್‌, ಶೇಂಗಾ ಸೇರಿದಂತೆ ಸಾವಿರಾರೂ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗುತ್ತದೆ.


ಕುಡಿವ ನೀರಿಗೆ ತತ್ವಾರ :

ಬೇಸಿಗೆ ಬಂತೆಂದರೆ ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ ತಾಲೂಕುಗಳ ನದಿ ತೀರದ ಹಳ್ಳಿಗಳಲ್ಲಿ ತಲೆದೋರುವ ಜಲಕ್ಷಾಮಕ್ಕೆ ಈವರೆಗೆ ಶಾಶ್ವತ ಪರಿಹಾರ ದೊರಕಿಲ್ಲ.

ABOUT THE AUTHOR

...view details