ಬೆಳಗಾವಿ:ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್ನಲ್ಲಿ ಭಾರತೀಯರ ಹೆಮ್ಮೆಯ ತ್ರಿವರ್ಣ ಗಾಳಿಪಟವನ್ನು ಇಂಗ್ಲೆಂಡ್ ಪ್ರಜೆ ಸಿದ್ಧಪಡಿಸಿ, ಭಾರತಾಂಬೆಯ ಪ್ರೇಮ ಮೆರೆದಿದ್ದಾರೆ.
ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್: ತ್ರಿವರ್ಣ ಗಾಳಿಪಟ ಸಿದ್ದಪಡಿಸಿದ ಇಂಗ್ಲೆಂಡ್ ಪ್ರಜೆ! - belgavi latest news
ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್ನಲ್ಲಿ ಭಾರತೀಯರ ಹೆಮ್ಮೆಯ ತ್ರಿವರ್ಣ ಗಾಳಿಪಟವನ್ನು ಇಂಗ್ಲೆಂಡ್ ಪ್ರಜೆ ಸಿದ್ಧಪಡಿಸಿ, ಭಾರತಾಂಬೆಯ ಪ್ರೇಮ ಮೆರೆದಿದ್ದಾರೆ.
ಶಾಸಕ ಅಭಯ ಪಾಟೀಲ್ ಅವರ ಪರಿವರ್ತನಾ ಪರಿವಾರ ಫೌಂಡೇಶನ್ನಿಂದ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಈ ವೇಳೆ, ಈ ಟಿವಿ ಭಾರತದೊಂದಿಗೆ ಮಾತನಾಡಿದ ಇಂಗ್ಲೆಂಡ್ ಪ್ರಜೆ ಬಾಬ್ಸ್, ಭಾರತೀಯರ ಸರಳತೆ ಹಾಗೂ ನಗು ನನಗೆ ಇಷ್ಟವಾಗುತ್ತದೆ. ಭಾರತ ಮೇಲಿನ ಪ್ರೀತಿಗೆ ತ್ರಿವರ್ಣ ಗಾಳಿಪಟ ಸಿದ್ಧಪಡಿಸಿ, ಬಾನಂಗಳದಲ್ಲಿ ಹಾರಿಸುತ್ತಿದ್ದೇನೆ ಎಂದು ಹೇಳಿದರು.
ಅಷ್ಟೇ ಅಲ್ಲದೇ ಸಾಕಷ್ಟು ಬಾರಿ ಭಾರತಕ್ಕೆ ಬಂದಿದ್ದೇನೆ. ಬೆಳಗಾವಿಯಲ್ಲಿ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದು ನಾಲ್ಕನೇ ಸಲ. ಭಾರತದ ಆಹಾರ ನನಗೆ ಇಷ್ಟ, ಜೊತೆಗೆ ಮಸಾಲಾ ಚಹಾ ಅಂದ್ರೆ ಪಂಚ ಪ್ರಾಣ ಎಂದು ಖುಷಿ ಹಂಚಿಕೊಂಡರು.