ಚಿಕ್ಕೋಡಿ (ಬೆಳಗಾವಿ) :ಕೋಳಿ, ಹಾಗೂ ಕೋಳಿ ಮೊಟ್ಟೆ ತಿಂದರೆ ಕೊರೊನಾ ಬರುತ್ತೆ ಎಂಬ ವದಂತಿಯಿಂದ ಆದೆಷ್ಟೋ ಕೋಳಿ ಉದ್ಯಮಿಗಳು ಬೀದಿಗೆ ಬಂದಿದ್ದಾರೆ. ಆದರೆ ಸದ್ಯದಲ್ಲಿ ಕೋಳಿ ಹಾಗೂ ಕೋಳಿ ಮೊಟ್ಟೆ ದರ ಗಗನಕ್ಕೇರಿದ್ದು ಕೋಳಿ ಉದ್ಯಮಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ಕೊರೊನಾ ಬಳಿಕ ಏರುತ್ತಲೇ ಇದೆ ಕೋಳಿ ಮೊಟ್ಟೆ ದರ - ಮೊಟ್ಟೆಗಳ ಮಾರುಕಟ್ಟೆ ಬೆಲೆ
ಕೊರೊನಾ ಮಹಾಮಾರಿ ಒಕ್ಕರಿಸಿದ ಸಂದರ್ಭದಲ್ಲಿ ಅದೆಷ್ಟೋ ಕೋಳಿ ಉದ್ಯಮಿಗಳು ಕೋಳಿಗಳನ್ನು ಜೀವಂತ ಸಮಾಧಿ ಮಾಡುವುದರ ಜೊತೆಗೆ ಕೋಳಿ ಹಾಗೂ ಮೊಟ್ಟೆಗಳನ್ನು ಉಚಿತವಾಗಿ ನೀಡಿದರೂ ಸಹಿತ ಯಾರೂ ಕೂಡಾ ಕೋಳಿ ಹಾಗೂ ಮೊಟ್ಟೆಗಳನ್ನು ಕೊಳ್ಳಲು ಮುಂದಾಗಿರಲಿಲ್ಲ. ಆದರೆ ಸದ್ಯ ಒಂದು ಮೊಟ್ಟೆಯ ಬೆಲೆ ಮಾರುಕಟ್ಟೆಯಲ್ಲಿ 5 ರಿಂದ 6 ರೂಪಾಯಿ ಆಗಿದೆ.
ಕೊರೊನಾ ಮಹಾಮಾರಿ ಒಕ್ಕರಿಸಿದ ಸಂದರ್ಭದಲ್ಲಿ ಅದೆಷ್ಟೋ ಕೋಳಿ ಉದ್ಯಮಿಗಳು ಕೋಳಿಗಳನ್ನು ಜೀವಂತ ಸಮಾಧಿ ಮಾಡುವುದರ ಜೊತೆಗೆ ಉಚಿತವಾಗಿ ನೀಡಿದರೂ ಸಹಿತ ಯಾರೂ ಕೂಡಾ ಕೋಳಿ ಹಾಗೂ ಮೊಟ್ಟೆಗಳನ್ನು ಕೊಳ್ಳಲು ಮುಂದಾಗಿರಲಿಲ್ಲ. ಆದರೆ ಸದ್ಯ ಒಂದು ಮೊಟ್ಟೆಯ ಬೆಲೆ ಮಾರುಕಟ್ಟೆಯಲ್ಲಿ 5 ರಿಂದ 6 ರೂಪಾಯಿ ಆಗಿದೆ.
ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಒಂದು ಮೊಟ್ಟೆ ಬೆಲೆ ಮಾರುಕಟ್ಟೆಯಲ್ಲಿ 4 ರೂಪಾಯಿಗೆ ಮಾರಾಟವಾಗುತ್ತಿತ್ತು. ಅದರೆ ಈ ವರ್ಷ ಮೊಟ್ಟೆಗೆ ಡಿಮ್ಯಾಂಡ್ ಬಂದಿದ್ದು, 5 ರಿಂದ 6 ರೂಪಾಯಿಗೆ ಒಂದು ಮೊಟ್ಟೆ ದೊರೆಯಲಿದೆ. ಇದನ್ನು ಖರೀದಿಸಿ ಚಿಲ್ಲರೆ ವ್ಯಾಪಾರಿಗಳು 6.50 ರಿಂದ 7.50 ರೂಪಾಯಿ ವರೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮೊಟ್ಟೆಗೆ ಈಗ ಡಿಮ್ಯಾಂಡ್ ಹೆಚ್ಚಾಗಿದೆ.