ಬೆಳಗಾವಿ: ಬೋರ್ವೆಲ್ ತೆಗೆಯುವ ಸಂದರ್ಭದಲ್ಲಿ ಲೋಕೋಪಯೋಗಿ ಅಧಿಕಾರಿಗಳ ಎಡವಟ್ಟಿನಿಂದ ಕುಡಿಯುವ ನೀರಿನ ಪೈಪ್ಲೈನ್ ಒಡೆದು ಅಪಾರ ಪ್ರಮಾಣ ನೀರು ರಸ್ತೆ ಪಾಲಾಗಿದೆ.
ನಗರದ ಗೋವಾ ವೇಸ್ ಬಳಿ ಬೋರ್ವೆಲ್ ಮಷಿನ್ನಿಂದ ಕೊಳವೆ ಸುರಂಗ ಕೊರೆಯುವ ವೇಳೆ ಬೆಳಗಾವಿ ನಗರಕ್ಕೆ ದಿನದ 24ಗಂಟೆಗಳ ಕಾಲ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಪೈಪ್ಲೈನ್ ಒಡೆದುಹೋಗಿದೆ. ಈ ವೇಳೆ ಕುಡಿಯುವ ನೀರಿನ ಪೈಪ್ನಿಂದ ನೀರು ಕಾರಂಜಿ ರೀತಿ ಧುಮ್ಮಿಕ್ಕಿದ್ದರಿಂದ, ಬೈಕ್ ಹಾಗೂ ವಾಹನ ಸವಾರರು ರಸ್ತೆ ದಾಟಲು ಪರದಾಡುವಂತಾಯಿತು.