ಅಥಣಿ:ನಾವು ಅನರ್ಹರಲ್ಲ, ನಾವಾಗಿಯೇ ರಾಜೀನಾಮೆ ಕೊಟ್ಟ ಬಳಿಕ ನಮ್ಮನ್ನು ಅನರ್ಹರನ್ನಾಗಿ ಮಾಡಿದ್ದಾರೆ. ಅನರ್ಹ ಅನ್ನಬೇಡಿ ಎಂದು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ನಮ್ಮನ್ನು ಪದೇ ಪದೆ ಅನರ್ಹರು ಎನ್ನಬೇಡಿ, ನಾವಾಗಿಯೇ ಪಕ್ಷ ಬಿಟ್ಟಿದ್ದೇವೆ: ಕುಮಟಳ್ಳಿ ಮನವಿ - ಮಹೇಶ್ ಕುಮಟಳ್ಳಿ ಲೇಟೆಸ್ಟ್ ನ್ಯೂಸ್
ನಾವು ರಾಜೀನಾಮೆ ನೀಡಿದ ಬಳಿಕ ಸ್ಪೀಕರ್ ಅನರ್ಹಗೊಳಿಸಿದ್ದಾರೆ ನಮ್ಮನ ಅನರ್ಹ ಎನ್ನಬೇಡಿ ಎಂದು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮನವಿ ಮಾಡಿದ್ದಾರೆ.
ಮಹೇಶ್ ಕುಮಟಳ್ಳಿ
ಕ್ಷೇತ್ರಕ್ಕೆ ನಾಳೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಿಂದ ಬೇಸರಗೊಂಡು ನಾವಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ನಾವು ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಹೀಗಾಗಿ ನಾವು ಅನರ್ಹರಲ್ಲ. ನಮಗೆ ಅನರ್ಹ ಅನ್ನಬೇಡಿ ಎಂದಿದ್ದಾರೆ. ಸವದಿ ಅವರ ಮಾರ್ಗದರ್ಶನದಲ್ಲೇ ಪ್ರಚಾರ ಆರಂಭಿಸೋದಾಗಿ ತಿಳಿಸಿದ್ದಾರೆ.