ಕಲಬುರಗಿ:ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಿದ 2 ಗಂಟೆಗಳ ಒಳಗೆ ವರ್ಗಾವಣೆಯನ್ನು ತಡೆಹಿಡಿಯುವಂತೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಅಲ್ಪಾವಧಿಯಲ್ಲೇ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾದ ಶರತ್ ಅವರ ವರ್ಗಾವಣೆ ಕಲಬುರಗಿ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು.
ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಹಗಲಿರುಳು ಹೋರಾಡಿದ ಶರತ್ ಅವರ ವರ್ಗಾವಣೆ ತಡೆಯುವಂತೆ ಜನ ಒತ್ತಾಯಿಸಿದ್ದರು. ಜನರ ಒತ್ತಾಯಕ್ಕೆ ಮಣಿದ ಸಿಎಂ ಬಿ.ಎಸ್. ಯಡಿಯೂರಪ್ಪ ಶರತ್ ಅವರ ವರ್ಗಾವಣೆ ತಡೆಯುವಂತೆ ಆದೇಶಿಸಿದ್ದಾರೆ.