ಅಥಣಿ:ಕರಿಮಸೂತಿ ಯೋಜನೆಯಡಿ ಹಲ್ಯಾಳ ಏತ ನೀರಾವರಿಯಿಂದಾಗಿ ತಾಲೂಕಿನ ಬಹುಭಾಗ ಪ್ರದೇಶಕ್ಕೆ ನೀರು ಹರಿಯಲಿದ್ದು ಎಲ್ಲ ಕೆರೆ, ಕಾಲುವೆಗಳು ತುಂಬಲಿವೆ. ಇದರಿಂದ ಅಥಣಿ ತಾಲ್ಲೂಕಿನ ಎಲ್ಲ ಕೃಷಿಕರ ಬವಣೆ ಕಡಿಮೆಯಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಅಥಣಿಯಲ್ಲಿ ಹಲ್ಯಾಳ ಏತ ನೀರಾವರಿ ಯೋಜನೆಗೆ ಡಿಸಿಎಂ ಸವದಿ ಚಾಲನೆ
ಅಥಣಿ ಮತಕ್ಷೇತ್ರದ ಹಲ್ಯಾಳ ಏತ ನೀರಾವರಿ ಯೋಜನೆಗೆ ಗುರುವಾರ ಚಾಲನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ, ಕರಿಮಸೂತಿ ಯೋಜನೆಯಡಿ ಹಲ್ಯಾಳ ಏತ ನೀರಾವರಿಯಿಂದಾಗಿ ತಾಲೂಕಿನ ಬಹುಭಾಗ ಪ್ರದೇಶಕ್ಕೆ ನೀರು ಹರಿಯಲಿದ್ದು ಎಲ್ಲ ಕೆರೆ, ಕಾಲುವೆಗಳು ತುಂಬಲಿವೆ ಎಂದು ಹೇಳಿದರು.
ಅಥಣಿ ಮತಕ್ಷೇತ್ರದ ಹಲ್ಯಾಳ ಏತ ನೀರಾವರಿ ಯೋಜನೆಗೆ ಗುರುವಾರ ಚಾಲನೆ ನೀಡಿದ ಸವದಿ, ಈ ಯೋಜನೆಯಿಂದಾಗಿ ಅಂತರ್ಜಲ ಮಟ್ಟ ಸುಧಾರಣೆಯಾಗುವುದರ ಜೊತೆಗೆ ಬತ್ತಿ ಹೋಗಿದ್ದ ಕೊಳವೆ ಬಾವಿಗಳನ್ನು ಮರು ಉಪಯೋಗಿಸಲು ಸಹ ಸಾಧ್ಯವಾಗುತ್ತದೆ. ಸಾವಿರಾರು ಅಡಿ ಆಳ ಕೊಳವೆ ಬಾವಿಗಳನ್ನು ಕೊರೆಯಿಸಿ ನಷ್ಟದಲ್ಲಿದ್ದ ರೈತರಿಗೆ ಈ ಯೋಜನೆ ಸಹಕಾರಿಯಾಗಿದೆ. ನೀರಾವರಿ ಯೋಜನೆಗಳಿಂದಾಗಿ ವಲಸೆ ಹೋಗಿದ್ದ ಸಾವಿರಾರು ಕುಟುಂಬಗಳು ವಾಪಸ್ ಬಂದು ಕೃಷಿ ಕಾರ್ಯದಲ್ಲಿ ತೊಡಗಿ ಸಮೃದ್ಧಿ ಜೀವನ ನಡೆಸುತ್ತಿರುವುದು ಒಳ್ಳೆಯ ವಿಚಾರ ಎಂದರು.
ಅಥಣಿ ತಾಲೂಕಿನ ಎಲ್ಲಾ ರೈತರು ಕರಿಮಸೂತಿ ಯೋಜನೆಯಡಿ ಬರುವ ಹಲ್ಯಾಳ ಏತ ನೀರಾವರಿ ಯೋಜನೆಯ ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದು ಸಮೃದ್ಧಿ ಜೀವನ ನಡೆಸಬೇಕೆಂದು ಕ್ಷೇತ್ರದ ನಾಗರಿಕರಲ್ಲಿ ಸಚಿವರು ಮನವಿ ಮಾಡಿದರು.