ಬೆಳಗಾವಿ:ಜಿಲ್ಲಾ ಪ್ರವಾಸ ಕೈಗೊಂಡಿರುವ ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥ್ ನಾರಾಯಣ ಇಂದು ನಗರದ ಮೂರು ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿದರು.
ಬೆಳಗಾವಿಯ ಮೂರು ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ - DCM Ashwath Narayana visited belagavi
ಡಿಸಿಎಂ ಅಶ್ವತ್ಥ ನಾರಾಯಣ ಇಂದು ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್, ಸರ್ದಾರ್ ಕಾಲೇಜು, ಸಂಗೊಳ್ಳಿ ರಾಯಣ್ಣ ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್, ಸರ್ದಾರ್ ಕಾಲೇಜು, ಸಂಗೊಳ್ಳಿ ರಾಯಣ್ಣ ಕಾಲೇಜುಗಳಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಸರ್ಕಾರಿ ಪಾಲಿಟೆಕ್ನಿಕ್ನ ಪ್ರತಿ ತರಗತಿಗಳಿಗೂ ಭೇಟಿ ನೀಡಿದ ಡಿಸಿಎಂ ಆಫ್‌ಲೈನ್ ಕ್ಲಾಸ್‌ಗೆ ಹಾಜರಾದ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ಕಾಲೇಜು ಆರಂಭವಾದ ಮೇಲೆ ಏನಾದರೂ ಸಮಸ್ಯೆ ಇದೆಯಾ? ಕೋವಿಡ್ ಟೆಸ್ಟ್ ಉಚಿತವಾಗಿ ಮಾಡಲಾಗುತ್ತಿದೆಯಾ? ಎಲ್ಲಾ ರೀತಿಯ ಮುಂಜಾಗ್ರತೆ ವಹಿಸಲಾಗಿದೆಯೇ ಎಂದು ವಿದ್ಯಾರ್ಥಿಗಳ ಬಳಿ ಸಚಿವರು ವಿಚಾರಿಸಿದರು.
ಕಾಲೇಜು ಉಪನ್ಯಾಸಕರ ಬಳಿಯೂ ಪಾಠ ಪ್ರವಚನದ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಇನ್ನು ಸಂಗೊಳ್ಳಿ ರಾಯಣ್ಣ ಕಾಲೇಜಿನ ನಿರ್ಮಾಣ ಹಂತದ ಕಟ್ಟಡಕ್ಕೂ ಭೇಟಿ ನೀಡಿದ ಸಚಿವರಿಗೆ ಹೆಚ್ಚಿನ ಜಾಗ ನೀಡುವಂತೆ ಶಾಸಕ ಅನಿಲ್ ಬೆನಕೆ ಮನವಿ ಮಾಡಿದರು. ಅಲ್ಲದೇ ಸರ್ಕಾರಿ ಕಾಲೇಜುಗಳಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಶಾಸಕ ಅನಿಲ್ ಬೆನಕೆ ಕೋರಿದರು. ಸಮಸ್ಯೆ ಪರಿಹರಿಸುವುದಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ಭರವಸೆ ನೀಡಿದರು.