ಕರ್ನಾಟಕ

karnataka

ETV Bharat / state

ಗೊಂದಲದ ಗೂಡಾದ ಬಿಮ್ಸ್ ಆಸ್ಪತ್ರೆ... ಸೋಂಕಿತನ ಮೂರು ವರದಿಗಳೇ ನಾಪತ್ತೆ​​​!

ಬಿಮ್ಸ್ ಆಸ್ಪತ್ರೆ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗುತ್ತಿದ್ದು, ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಇದೆ. ಇದೀಗ ಓರ್ವ ಸೋಂಕಿತನ ಮೂರು ವರದಿಗಳೇ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ. ಇದು ಆಸ್ಪತ್ರೆ ಸಿಬ್ಬಂದಿಯ ಕಾರ್ಯದಕ್ಷತೆ ಕುರಿತು ಪ್ರಶ್ನೆ ಮೂಡುವಂತೆ ಮಾಡಿದೆ.

corona infected persons  three reports are  Missing in BIMS
ಗೊಂದಲದ ಗೂಡಾದ ಬಿಮ್ಸ್ ಆಸ್ಪತ್ರೆ...ಸೋಂಕಿತನ ಮೂರು ವರದಿ ಮಿಸ್ಸಿಂಗ್​​​

By

Published : Jul 27, 2020, 4:59 PM IST

ಬೆಳಗಾವಿ: ಕೊರೊನಾ ಸೋಂಕಿತನ 3 ಕೋವಿಡ್ ವರದಿಗಳೇ ಮಂಗಮಾಯ ಆಗಿರುವ ಆರೋಪ ಪ್ರಕರಣ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತನಿಂದ ಮೂರು ಬಾರಿ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಇದೀಗ ಆ ವರದಿಗಳೇ ಕಾಣೆಯಾಗಿವೆ ಎನ್ನಲಾಗ್ತಿದೆ. ಹೀಗಾಗಿ ಸೋಂಕಿತ ಭಯಭೀತನಾಗಿದ್ದಲ್ಲದೆ, ಈ ಘಟನೆ ಇತರ ರೋಗಿಗಳನ್ನು ಸಹ ಆತಂಕಕ್ಕೆ ದೂಡಿದೆ.

ಗೊಂದಲದ ಗೂಡಾದ ಬಿಮ್ಸ್ ಆಸ್ಪತ್ರೆ... ಸೋಂಕಿತನ ಮೂರು ವರದಿಗಳೇ ಮಿಸ್ಸಿಂಗ್​! ​​

ನಿಮ್ಮ ರಿಪೋರ್ಟ್ ಮಿಸ್ ಆಗಿದೆ ಎಂದು ಕಾರಣ ನೀಡಿ ಇಲ್ಲಿನ ಬಿಮ್ಸ್ ಸಿಬ್ಬಂದಿ ಒಬ್ಬ ರೋಗಿಯಿಂದಲೇ ಮೂರು ಸಲ ಗಂಟಲು ದ್ರವ ಪಡೆದಿದ್ದಾರೆ. ಪದೇ ಪದೇ ಗಂಟಲು ದ್ರವ ನೀಡುತ್ತಿರುವ ರೋಗಿ ನರಕಯಾತನೆ ಅನುಭವಿಸುವಂತಾಗಿದೆ.

ಈ ರೋಗಿ ಕಳೆದ 8 ದಿನಗಳ ಹಿಂದೆ ಕೋವಿಡ್ ವಾರ್ಡ್​ಗೆ ದಾಖಲಾಗಿದ್ದ. ಸರಿಯಾಗಿ ಉಪಚಾರ ಮಾಡದೇ, ರಿಪೋರ್ಟ್ ನೀಡದ ಬಿಮ್ಸ್ ವಿರುದ್ಧ ಸೋಂಕಿತ ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ABOUT THE AUTHOR

...view details