ಕರ್ನಾಟಕ

karnataka

By

Published : Nov 22, 2020, 6:04 PM IST

ETV Bharat / state

ಸಮಾನ ವೇತನಕ್ಕೆ ಆಗ್ರಹಿಸಿ ಶಿಕ್ಷಕರಿಂದ ಸಂವಾದ ಕಾರ್ಯಕ್ರಮ

ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿರುವ ನೂತನ ಎನ್​​​ಪಿಎಸ್ ಯೋಜನೆ ಹಿಂಪಡೆದು, ಹಳೆ ಯೋಜನೆ ಮುಂದುವರೆಸುವಂತೆ ಮುಂಬರುವ ದಿನಗಳಲ್ಲಿ ಹೋರಾಟದ ರೂಪರೇಷೆಗಳ ನಿರ್ಧಾರ..

ಸರ್ಕಾರಿ ನೌಕರರ ಮತ್ತು ಶಿಕ್ಷಕರ ಸಂವಾದ ಕಾರ್ಯಕ್ರಮ
ಸರ್ಕಾರಿ ನೌಕರರ ಮತ್ತು ಶಿಕ್ಷಕರ ಸಂವಾದ ಕಾರ್ಯಕ್ರಮ

ಬೆಳಗಾವಿ:ನಗರದ ಸಿಪಿಎಡ್ ಮೈದಾನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡ ಸರ್ಕಾರಿ ನೌಕರರ ಮತ್ತು ಶಿಕ್ಷಕರ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರಕ್ಕೆ ಸಮಾನ ವೇತನಕ್ಕೆ ಆಗ್ರಹಿಸುವುದರ ಜೊತೆಗೆ ನೂತನ ಎನ್‌ಪಿಎಸ್ ಯೋಜನೆಯನ್ನು ವಿರೋಧಿಸಿದರು.

ಮಾರುಕಟ್ಟೆ ಸರಕಾಗುತ್ತಿರುವ ಎನ್‌ಪಿಎಸ್ ಯೋಜನೆ ಕಾರ್ಪೊರೇಟ್ ಕಂಪನಿಗಳಿಗೆ ರೆಡ್ ಕಾರ್ಪೆಟ್ ಆಗುತ್ತಿದೆ. ಸರ್ಕಾರಿ ನೌಕರರಿಗೆ ಮರಣಶಾಸನವಾಗಿದೆ. ಹೀಗಾಗಿ ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಂದಿನ ಹೋರಾಟಕ್ಕೆ ಆದಷ್ಟು ಬೇಗ ಮುಹೂರ್ತ ನಿಗದಿ ಮಾಡಬೇಕೆಂದು ಎಲ್ಲ ನೌಕರರು ಒತ್ತಾಯಿಸಿದರು.

ಸಮಾನ ವೇತನಕ್ಕೆ ಆಗ್ರಹಿಸಿ ಶಿಕ್ಷಕರಿಂದ ಸಂವಾದ ಕಾರ್ಯಕ್ರಮ

ಈ ವೇಳೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್‌ ಷಡಾಕ್ಷರಿ, ಪ್ರತಿವರ್ಷ ಸರ್ಕಾರ ಘೋಷಣೆ ಮಾಡುವ ಬಜೆಟ್​​ನ ಸಾಕಾರಗೊಳಿಸುವ ಜವಾಬ್ದಾರಿ ಸರ್ಕಾರಿ ನೌಕರರದ್ದಾಗಿರುತ್ತದೆ. ಅಂತಹ ಮಹತ್ವದ ಕರ್ತವ್ಯ, ಸೇವೆಯಲ್ಲಿರುವ ನೌಕರರ ಹಿತಾಸಕ್ತಿ ಕಾಪಾಡುವುದು ಸಂಘಟನೆಗಳ ಜವಾಬ್ದಾರಿ. ಸಂಘಟನೆಗಳಿಗೆ ಸೇರುವುದು ಸುಲಭವಾದರೂ ಕೆಲಸ, ಸಾಧನೆಗಳ ಮೂಲಕ ಗುರುತಿಸಿಕೊಳ್ಳುವುದು ಅಪರೂಪ.

ಇಂತಹ ಹತ್ತಾರು ಸದುದ್ದೇಶಗಳನ್ನು ಹೊಂದಿರುವ ರಾಜ್ಯ ಸರ್ಕಾರಿ ನೌಕರರ ಸಂಘ ಹಿಂದೆಂದೂ ಮಾಡದ ನೌಕರರ ಪರ ಕೆಲಸಗಳನ್ನು ಸುಲಭವಾಗಿ ಮಾಡುತ್ತಿದೆ. ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿರುವ ನೂತನ ಎನ್​​​ಪಿಎಸ್ ಯೋಜನೆ ಹಿಂಪಡೆದು, ಹಳೆ ಯೋಜನೆ ಮುಂದುವರೆಸುವಂತೆ ಮುಂಬರುವ ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲಾಗುವುದು ಎಂದರು.

ABOUT THE AUTHOR

...view details