ಬೆಳಗಾವಿ/ಅಥಣಿ: ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ, ಗಜಾನನ ಮಂಗಸೂಳಿ ಮಾಡಿದ ಆರೋಪ ಸತ್ಯಕ್ಕೆ ದೂರವಾದುದು ಎಂದರು.
ಕಾಂಗ್ರೆಸ್ ಅಭ್ಯರ್ಥಿಯ ಆರೋಪ ಸತ್ಯಕ್ಕೆ ದೂರವಾದುದು: ಮಹೇಶ್ ಕುಮಟಳ್ಳಿ - ಮಹೇಶ್ ಕುಮಟಳ್ಳಿ ಲೇಟೆಸ್ಟ್ ನ್ಯೂಸ್
ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೆಶ್ ಕುಮಟಳ್ಳಿ ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಮಾಡಿದ ಆರೋಪವನ್ನು ಮಹೇಶ್ ಕುಮಟಳ್ಳಿ ನಿರಾಕರಿಸಿದ್ದಾರೆ.
ಮಹೇಶ್ ಕುಮಟಳ್ಳಿ
ಹಣ ಪಡೆದು ನಾನು ಬಿಜೆಪಿ ಅಭ್ಯರ್ಥಿ ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳು ಆರೋಪ ಪ್ರತ್ಯಾರೋಪ ಮಾಡುವುದು ಸಹಜ. ಆದ್ದರಿಂದ ನಾನು ಹಣ ಪಡೆದಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ನಮಗೆ ಬಿಜೆಪಿಯಲ್ಲಿ ಗೌರವ ನೀಡಿ ಪಕ್ಷದ ಟಿಕೆಟ್ ನೀಡಿದ್ದಾರೆ ಎಂದರು.
ತಮ್ಮ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಲಕ್ಷ್ಮಣ ಸವದಿ ಟಿಕೆಟ್ ಬಿಟ್ಟು ಕೊಟ್ಟು ನನಗೆ ಅವಕಾಶ ಕೊಡಿಸಿದ್ದಾರೆ. ಅವರ ನೇತೃತ್ವದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಕುಮಟಳ್ಳಿ ಹೇಳಿದರು.
Last Updated : Nov 20, 2019, 1:37 PM IST