ಚಿಕ್ಕೋಡಿ/ಬೆಳಗಾವಿ: ಗೋಕಾಕ್‌ದ ಬ್ಯಾಳಿಕಾಟದಿಂದ ಬಸವೇಶ್ವರವೃತ್ತದವರೆಗೂ ಮೆರವಣಿಗೆ ನಡೆಸಿ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಮಂಗಳಾ ಅಂಗಡಿ ಪರ ಸಿಎಂ ಯಡಿಯೂರಪ್ಪ ಪ್ರಚಾರ - ಮಂಗಳಾ ಅಂಗಡಿ
ನಿಮ್ಮ ಮನೆಯ ಅಳಿಯನಂತೆ ನಾಲ್ಕು ಬಾರಿ ಗೆಲ್ಲಿಸಿದ್ರಿ. ಈಗ ನಿಮ್ಮ ಮನೆ ಮಗಳಾಗಿ ನಾನು ಬಂದಿದ್ದೇನೆ. ನಿಮ್ಮ ಮನೆ ಮಗಳೆಂದು ತಿಳಿದು ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು..
ಈ ವೇಳೆ ಮಾತನಾಡಿದ ಸಿಎಂ, ಕೊವೀಡ್ನಿಂದ ಸುರೇಶ್ ಅಂಗಡಿ ಬಲಿಯಾದ ಪರಿಣಾಮ ಅವರ ಸ್ಥಾನದಲ್ಲಿ ಮಂಗಳಾ ಅಂಗಡಿಯವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಮತಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ಬಾಲಚಂದ್ರ ಜಾರಕಿಹೊಳಿ ಆರವತ್ತು ಸಾವಿರ ಲೀಡ್ ಕೊಡಬೇಕು. ನೀವು ಮಂಗಳಾ ಅಂಗಡಿ ಗೆಲ್ಲುಸುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದರು.
ನಂತರ ಮಾತನಾಡುವ ವೇಳೆ ಮಂಗಳಾ ಅಂಗಡಿ ಅವರು ಪತಿ ಸುರೇಶ್ ಅಂಗಡಿ ಅವರನ್ನ ನೆನೆದು ಭಾವುಕರಾದರು. ನಿಮ್ಮ ಮನೆಯ ಅಳಿಯನಂತೆ ನಾಲ್ಕು ಬಾರಿ ಗೆಲ್ಲಿಸಿದ್ರಿ. ಈಗ ನಿಮ್ಮ ಮನೆ ಮಗಳಾಗಿ ನಾನು ಬಂದಿದ್ದೇನೆ. ನಿಮ್ಮ ಮನೆ ಮಗಳೆಂದು ತಿಳಿದು ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.