ಬೆಳಗಾವಿ: ಪುಕ್ಸಟ್ಟೆಯಾಗಿ ಸಿಗುತ್ತೆ ಎಂಬ ಕಾರಣಕ್ಕೆ ಉಪಹಾರಕ್ಕಾಗಿ ಉಮೇಶ್ ಕತ್ತಿ ಅವರ ಹೋಟೆಲ್ಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗೆ ಚಟಾಕಿ ಹಾರಿಸಿದ್ದಾರೆ.
ಪುಕ್ಸಟ್ಟೆ ಉಪಹಾರ ಸಿಗುತ್ತೆ ಅಂತಾ ಕತ್ತಿ ಹೋಟೆಲ್ಗೆ ಬಂದಿದ್ದೇನೆ: ಸಿಎಂ ನಗೆ ಚಟಾಕಿ - CM BS Yadiyurappa news
ಬೆಳಗಾವಿಯ ಹೋಟೆಲ್ ಯುಕೆ 27 ನಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಜತೆಗೆ ಉಪಹಾರ ಸೇವನೆ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ, ಕತ್ತಿಯವರ ಹೋಟೆಲ್ಗೆ ಬಂದ್ರೆ ಪುಕ್ಸಟ್ಟೆ ಸಿಗುತ್ತೆ ಅಂತಾ ಗೊತ್ತು. ಈ ಕಾರಣಕ್ಕಾಗಿ ಇಲ್ಲಿಗೆ ಬಂದ್ದಿದ್ದೇನೆ ಎಂದರು.
ಸಿಎಂ ನಗೆಚಟಾಕಿ
ಬೆಳಗಾವಿಯ ಹೋಟೆಲ್ ಯುಕೆ 27 ನಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಜತೆಗೆ ಉಪಹಾರ ಸೇವನೆ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ, ಕತ್ತಿಯವರ ಹೋಟೆಲ್ಗೆ ಬಂದ್ರೆ ಪುಕ್ಸಟ್ಟೆ ಸಿಗುತ್ತೆ ಅಂತಾ ಗೊತ್ತು. ಈ ಕಾರಣಕ್ಕಾಗಿ ಇಲ್ಲಿಗೆ ಬಂದ್ದಿದ್ದೇನೆ ಎಂದರು.
ಬೆಳಗಾವಿ ಪ್ರವಾಸದ ಸಂದರ್ಭದಲ್ಲಿ ಉಮೇಶ್ ಕತ್ತಿ ಜತೆಗಿದ್ದರು. ನನ್ನ ಜತೆಗೆ ಕತ್ತಿಯವರ ಮುನಿಸಿದೆ ಎಂಬುವುದು ಸುಳ್ಳು. ಡಿಸೆಂಬರ್ ವರೆಗೆ ಕಾಯಿರಿ. ಉಮೇಶ್ ಕತ್ತಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂದು ಕತ್ತಿ ಅವರನ್ನು ಸಿಎಂ ತಮ್ಮ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ದೊಡ್ಡ ಆಫರ್ ಕೂಡ ನೀಡಿದರು.
Last Updated : Oct 16, 2019, 6:40 AM IST