ಚಿಕ್ಕೋಡಿ(ಬೆಳಗಾವಿ): ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಿಎಂ, ಚಿಕ್ಕೋಡಿ ಉಪವಿಭಾಗಕ್ಕೂ ಭೇಟಿ ನೀಡಬೇಕು ಎಂದು ಚಿಕ್ಕೋಡಿ ರೈತ ಸಂಘದ ಮುಖಂಡ ಮಂಜುನಾಥ ಪರಗೊಂಡನವರ ಒತ್ತಾಯಿಸಿದ್ದಾರೆ.
ಚಿಕ್ಕೋಡಿ ಉಪವಿಭಾಗಕ್ಕೂ ಸಿಎಂ ಬೇಟಿ ನೀಡಿಲಿ: ರೈತ ಸಂಘ ಒತ್ತಾಯ ಕಳೆದ ವರ್ಷದ ಪರಿಹಾರದ ದುಡ್ಡು ಇನ್ನು ಕೆಲ ರೈತರಿಗೆ ಬಂದಿಲ್ಲ. ಈಗ ಮತ್ತೆ ಪ್ರವಾಹ ಎದುರಾಗಿದ್ದು, ಬೆಳೆದ ಬೆಳೆಗಳೆಲ್ಲವೂ ಸಂಪೂರ್ಣವಾಗಿ ಹಾಳಾಗಿವೆ. ಇದರಿಂದ ಚಿಕ್ಕೋಡಿ ವಿಭಾಗದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಈ ಬಾರಿ ಸಿಎಂ ಚಿಕ್ಕೋಡಿಯ ಕೃಷ್ಣಾ ನದಿ ತೀರದ ಬೆಳೆ ನಾಶವನ್ನು ವೀಕ್ಷಿಸಿ ಪರಿಹಾರ ನೀಡಬೇಕು ಎಂದು ಗಡಿ ಭಾಗದ ರೈತರು ಕೋರುತ್ತಿದ್ದಾರೆ.
ಚಿಕ್ಕೋಡಿ ಉಪವಿಭಾಗದಲ್ಲಿ ರೈತರು ಬೆಳೆದಿದ್ದ ಶೇಂಗಾ, ಕಬ್ಬು, ಜೋಳ, ಮೆಕ್ಕೆ, ತಂಬಾಕು, ತರಕಾರಿ ಇತ್ಯಾದಿ ಈ ಬಾರಿ ಪ್ರವಾಹದಿಂದಾಗಿ ನಾಶವಾಗಿದ್ದು, ಸಿಎಂ ಚಿಕ್ಕೋಡಿ ಉಪವಿಭಾಗಕ್ಕೆ ಬಂದು ಪರಶೀಲಿಸಿ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ರೈತರ ಬೆಳೆ ಸಮೀಕ್ಷೆಗೆ ಸರ್ಕಾರ ಆ್ಯಪ್ ಬಳಕೆ ಮಾಡುವಂತೆ ತಿಳಿಸಿದೆ. ಆದರೆ ಎಷ್ಟೋ ರೈತರ ಬಳಿ ಆಂಡ್ರಾಯ್ಡ್ ಮೊಬೈಲ್ ಫೋನ್ಗಳಿಲ್ಲ. ಕೆಲ ರೈತರು ಅನಕ್ಷರಸ್ಥರಾಗಿದ್ದಾರೆ. ಹೀಗಾಗಿ ಸರ್ಕಾರ ಪ್ರತಿ ಗ್ರಾಮ ಪಂಚಾಯತಿ ಅಧೀನದಲ್ಲಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.