ಬೆಳಗಾವಿ :ಬೆಳಗಾವಿಯಲ್ಲಿ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ನೂರಾರು ಜನರು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಲಸಿಕೆ ಕೊರತೆಯುಂಟಾಗಿದೆ. ಈ ಬಗ್ಗೆ ಬಿಮ್ಸ್ ಸಿಬ್ಬಂದಿ ಮತ್ತು ಪತ್ರಕರ್ತರ ಮಧ್ಯೆ ವಾಗ್ವಾದ ನಡೆದಿದೆ.
ನಗರದ ಬಿಮ್ಸ್ ಆಸ್ಪತ್ರೆಯ ಲಸಿಕೆ ಕಾರಣ ಕೇಂದ್ರದ ಎದುರು ಸಾರ್ವಜನಿಕರು ಕೋವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ನಿಂತಿದ್ದು, ಸದ್ಯ ಜಿಲ್ಲೆಯಲ್ಲಿ 2,040 ಕೋವ್ಯಾಕ್ಸಿನ್ ಲಸಿಕೆ ಮಾತ್ರ ಸ್ಟಾಕ್ ಇದೆ.
ಬಿಮ್ಸ್ನಲ್ಲಿ ನಿನ್ನೆ 12 ಜನರಿಗೆ ನೀಡುವಷ್ಟು ಮಾತ್ರ ಕೋವ್ಯಾಕ್ಸಿನ್ ಸ್ಟಾಕ್ ಇತ್ತು. ಆದ್ರೆ, ಇಂದು ಕೋವ್ಯಾಕ್ಸಿನ್ ಲಸಿಕೆ ಬಂದಿರಬಹುದೆಂಬ ಕಾರಣಕ್ಕೆ ಬೆಳಗ್ಗೆ 9 ಗಂಟೆಗೆ ಬಿಮ್ಸ್ ಆಸ್ಪತ್ರೆಗೆ ಆಗಮಿಸಿ ಲಸಿಕೆ ಪಡೆಯಲು ಕಾಯುತ್ತಿದ್ದಾರೆ.
ಇದಲ್ಲದೇ 18 ವರ್ಷ ಮೇಲ್ಪಟ್ಟವರು ಸಹ ಫಸ್ಟ್ ಡೋಸ್ ಪಡೆಯಲು ಮುಗಿಬೀಳ್ಳುತ್ತಿದ್ದು, ಸಾಲಿನಲ್ಲಿ ನಿಂತಿದ್ದಾರೆ.
ವರದಿ ಮಾಡ್ತಿದ್ದ ಮಾಧ್ಯಮಗಳ ಜೊತೆ ಬಿಮ್ಸ್ ಸಿಬ್ಬಂದಿ ವಾಗ್ವಾದ.. ಸಿಬ್ಬಂದಿ ವಾಗ್ವಾದ:ಬೆಳಗಾವಿ ಬಿಮ್ಸ್ ಯಡವಟ್ಟು ಬಗ್ಗೆ ವರದಿ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಬಿಮ್ಸ್ ಸಿಬ್ಬಂದಿ ವಾಗ್ವಾದ ನಡೆಸಿದರು. ಕೋವ್ಯಾಕ್ಸಿನ್ ಲಸಿಕೆ ಖಾಲಿ ಆಗಿದೆ ಅಂತ ಜನರನ್ನು ವಾಪಸ್ ಕಳುಹಿಸುತ್ತಿದ್ದ ವೇಳೆ ಚಿತ್ರೀಕರಣ ಮಾಡ್ತಿದ್ದ ಮಾಧ್ಯಮಗಳ ಮೇಲೆ ಡಾ.ಪ್ರತೀಕ್ ದಬ್ಬಾಳಿಕೆ ನಡೆಸಿದರೆಂದು ಆರೋಪಿಸಲಾಗಿದೆ.
ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಕೋವ್ಯಾಕ್ಸಿನ್:ನಗರದ ಬಿಮ್ಸ್ ಸಿಬ್ಬಂದಿ ಯಡವಟ್ಟಿನಿಂದ ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಲು ಬಂದವರಿಗೆ ನಿರಾಸೆ ಆಗಿದೆ. ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಲು ಬಂದವರನ್ನು ಬಿಮ್ಸ್ ವೈದ್ಯ ಡಾ.ಪ್ರತೀಕ್ ಕೋವ್ಯಾಕ್ಸಿನ್ ಖಾಲಿಯಾಗಿದೆ ಎಂದು ವಾಪಸ್ ಕಳಿಸಿದ್ದರು.
ಆರೋಗ್ಯ ಇಲಾಖೆ ಆರ್‌ಸಿಹೆಚ್‌ಒ ಡಾ.ಈಶ್ವರ್ ಗಡಾದ್ ದೂರವಾಣಿಯಲ್ಲಿ ಮಾತನಾಡಿ, ನಾವು ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಕೋವ್ಯಾಕ್ಸಿನ್ ನೀಡುವಂತೆ ನಮ್ಮ ಇಲಾಖೆಯಿಂದ ಅಲಾಟ್ ಮಾಡಿದ್ದೇವೆ.
ಆದರೂ, ಬಿಮ್ಸ್ ಸಿಬ್ಬಂದಿ ಕೆಲವರಿಗೆ ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ನೀಡುತ್ತಿದ್ದಾರೆ. ಹೀಗಾಗಿ, ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಬಂದವರಿಗೆ ನಿರಾಸೆ ಆಗುತ್ತಿದೆ ಎಂದರು.